ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋತ್ಸವದಲ್ಲಿ ರಾಜಕೀಯ ಮೇಲಾಟ

Last Updated 18 ಜನವರಿ 2023, 5:43 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮದಲ್ಲಿ ಎರಡು ದಿನಗಳ ಕಾಲ ಗ್ರಾಮೀಣಾಭಿವೃದ್ಧಿ ಫೌಂಡೇಷನ್‌ನಿಂದ ಏರ್ಪಡಿಸಿದ್ದ ತೋಂಕೆರೆ ರಂಗ ಸಂಕ್ರಾಂತಿ ಉತ್ಸವ ರಾಜಕೀಯ ಮಯವಾಯಿತು.

ರಂಗೋತ್ಸವದಲ್ಲಿ ಶನಿವಾರ ರಾತ್ರಿ ಡಾ.ಚಂದ್ರಶೇಖರ ಕಂಬಾರ ರಚಿಸಿರುವ ‘ಬೆಪ್ಪು ತಕ್ಕಡಿ ಬೋಳೇಶಂಕರ’, ಭಾನುವಾರ ರಾತ್ರಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ ನಡೆಯಿತು.

ಮೊದಲ ದಿನದ ಸಂಜೆ ಶಾಸಕ ಡಾ.ಜಿ. ಪರಮೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿದ್ದ ವಿಶ್ರಾಂತಿ ಧಾಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ₹ 12.5 ಕೋಟಿ ವೆಚ್ಚದಡಿ ಡಿ.ಎಸ್.ಜಿ. ಪಾಳ್ಯದಲ್ಲಿ ಸಮುದಾಯ ಆಸ್ಪತ್ರೆ ನಿರ್ಮಿಸಲಾಗುತ್ತದೆ. ನಾಟಕಗಳು ಬಹಳ ಹಿಂದಿನಿಂದಲೂ ಗ್ರಾಮೀಣರ ಬದುಕಿನ ಭಾಗವಾಗಿದೆ. ಕಳೆದ ವರ್ಷ ಕ್ಷೇತ್ರದಲ್ಲಿ ಮೂನ್ನೂರಕ್ಕೂ ಹೆಚ್ಚು ನಾಟಕ ಪ್ರದರ್ಶನ ಕಂಡಿವೆ ಎಂದರು.

ಬೆಳ್ಳಾವೆ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಸ್ವಾಮೀಜಿ ರಂಗ ಉತ್ಸವ ಉಧ್ಘಾಟಿಸಿದರು. ಭಾನುವಾರ ಸಂಜೆ ಮಾಜಿ ಶಾಸಕ ಪಿ.ಆರ್. ಸುಧಾಕರ ಲಾಲ್ ಮತ್ತು ಜೆಡಿಎಸ್ ಮುಖಂಡರ ಜೊತೆಗೆ ಕಾರ್ಯಕ್ರಮ
ನಡೆಯಿತು.

‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ ತಡವಾಗಿ ಪ್ರಾರಂಭವಾಯಿತು. ಈ ವೇಳೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಎಚ್. ಅನಿಲ್ ಕುಮಾರ್‌ ಮುಖಂಡರ ಜೊತೆ ಆಗಮಿಸಿದಾಗ ಮತ್ತೊಂದು ವೇದಿಕೆ ಕಾರ್ಯಕ್ರಮ ನಡೆಯಿತು.

ಗ್ರಾಮದ ಪ್ರಗತಿಪರ ಕೃಷಿಕ ಆಪಲ್‌ ಹನುಮಂತು ಮತ್ತು ಕಮಲಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಟಿ.ಆರ್. ನಾಗರಾಜು, ಉಪಾಧ್ಯಕ್ಷೆ ನರಸಮ್ಮ, ಫೌಂಡೇಷನ್‌ನ ಗೌರವಾಧ್ಯಕ್ಷ ಟಿ.ಆರ್. ಬಸವರಾಜು, ಅಧ್ಯಕ್ಷ ಸೂರ್ಯ ತೇಜಸ್ವಿ, ಕಾರ್ಯದರ್ಶಿ ಟಿ.ಎಸ್. ಹನುಮಂತರಾಜು, ಟಿ.ಎಲ್. ಶಿವಣ್ಣ, ರೇವಣ್ಣ ಮೂರ್ತಿ, ಗಿರೀಶ್, ಆನಂದ ಕುಮಾರ್ ಜೈನ, ಸೂರೇನಹಳ್ಳಿ ಸಿದ್ದನಂಜಯ್ಯ, ನಾರಾಯಣಪ್ಪ, ಗಿರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT