ಪೋಸ್ಟ್ ಬಾಕ್ಸ್‌ನಲ್ಲಿ ಮದ್ಯದ ಬಾಟಲ್‌ಗಳು

7

ಪೋಸ್ಟ್ ಬಾಕ್ಸ್‌ನಲ್ಲಿ ಮದ್ಯದ ಬಾಟಲ್‌ಗಳು

Published:
Updated:
Prajavani

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಅಂಚೆ ಡಬ್ಬದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬುಕ್ಕಾಪಟ್ಟಣ ಗ್ರಾಮದ ಹಾಗಲವಾಡಿ ರಸ್ತೆಯಲ್ಲಿ ಕಟ್ಟಿಂಗ್ ಸೆಲೂನ್ ಬಳಿ ಇಟ್ಟಿರುವ ಪೋಸ್ಟ್ ಬಾಕ್ಸ್‌ ಅನ್ನು ಗುರುವಾರ ತೆರೆದ ವೇಳೆ 3 ಬೀರು ಬಾಟಲಿಗಳು ಪತ್ತೆಯಾಗಿವೆ. ಅವುಗಳನ್ನು ಗಮನಿಸಿದರೆ ಕಿಡಿಗೇಡಿಗಳು ಪೋಸ್ಟ್ ಬಾಕ್ಸ್ ಬೀಗ ತೆಗೆದು ಖಾಲಿ ಬಾಟಲಿಗಳನ್ನು ಜೋಡಿಸಿ ಹೋಗಿರುವಂತಿದೆ.

ಸಾರ್ವಜನಿಕರು ಪೋಸ್ಟ್ ಬಾಕ್ಸ್‌ನಲ್ಲಿ ಕಾಗದ ಪತ್ರಗಳನ್ನು ಹಾಕುತ್ತಿದ್ದರು. ಈಗ ಅಂಚೆ ಇಲಾಖೆಯವರು ಈ ಬಾಕ್ಸ್ ಅನ್ನು ನಿರ್ವಹಣೆ ಮಾಡುತ್ತಿಲ್ಲವೇ. ಬಾಕ್ಸ್‌ನಲ್ಲಿ ಹಾಕಿದ ಖಾಸಗಿ ಪತ್ರಗಳ ಗತಿಯೇನು ಎನ್ನುವ ಪ್ರಶ್ನೆ ಸಾರ್ವಜನಿಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !