ಅಂಚಿನ ಸಮುದಾಯಗಳಿಗೆ ದೊರೆಯದ ಸ್ಥಾನ

7
ಕ್ರೀಡೆ, ಎನ್ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಮರ್ಶಕ ಬೂದಾಳು ವಿಷಾದ

ಅಂಚಿನ ಸಮುದಾಯಗಳಿಗೆ ದೊರೆಯದ ಸ್ಥಾನ

Published:
Updated:
Deccan Herald

ಹುಳಿಯಾರು: ‘ಸಮಾಜದಲ್ಲಿ, ಪಠ್ಯ ಪುಸ್ತಕಗಳಲ್ಲಿ, ರಾಜಕೀಯ ಕ್ಷೇತ್ರಗಳಲ್ಲಿ ಅಂಚಿನ ಸಮುದಾಯಗಳಿಗೆ ಉನ್ನತ ಸ್ಥಾನಮಾನ ಸಿಗುತ್ತಿಲ್ಲ. ಈ ಸಮುದಾಯಗಳು ಮತ್ತೊಬ್ಬರಿಂದ ನಿಯಂತ್ರಿಸಲ್ಪಡುತ್ತಿವೆ’ ಎಂದು ವಿಮರ್ಶಕ ನಟರಾಜ ಬೂದಾಳು ವಿಷಾದಿಸಿದರು.

ಹುಳಿಯಾರು–ಕೆಂಕೆರೆ ಬಿಎಂಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ರೆಡ್‌ಕ್ರಾಸ್, ಎನ್ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಠ್ಯ ವಿಷಯಗಳಲ್ಲಿ ಅಂಚಿನ ಸಮುದಾಯ ಮತ್ತು ಕೆಳವರ್ಗದ ಗ್ರಾಮೀಣ ಸಮುದಾಯಗಳ ಸಂಸ್ಕೃತಿಗಳಿಗೆ ಇಂದಿಗೂ ಸ್ಥಾನ ದೊರೆತಿಲ್ಲ. ಈ ಸಮುದಾಯಗಳಲ್ಲಿ ನಿರುದ್ಯೋಗ ಸಹ ತಾಂಡವಾಡುತ್ತಿದೆ. ಜಾಗತಿಕ ಮಾರುಕಟ್ಟೆ ಕೌಶಲದಾತರನ್ನು ಬಯಸುತ್ತಿದೆ. ಇಂತಹ ಸಂದರ್ಭದಲ್ಲಿ ಕೆಳ ಸಮುದಾಯಗಳನ್ನು ಆತ್ಮಸ್ಥೈರ್ಯವನ್ನು ತುಂಬಬೇಕು’ ಎಂದು ನುಡಿದರು.

‘ಆಧುನಿಕ ತಂತ್ರಜ್ಞಾನದ ಬದುಕಿನಲ್ಲಿ ಗೋಪ್ಯತೆ ಇಲ್ಲದಾಗಿದೆ. ಗೋಪ್ಯವಾಗಿರಬೇಕಾದ ನಮ್ಮ ಮಾಹಿತಿಗಳನ್ನು ನಾವೇ ಬಯಲುಗೊಳಿಸುತ್ತಿದ್ದೇವೆ. ಇಂಗ್ಲಿಷ್ ಕಲಿಕೆಯ ಭೂತ ನಮ್ಮನ್ನು ಕಾಡುತ್ತಿದೆ. ನಮ್ಮ ಬಳಕೆಗೆ ಬೇಕಾದ 40 ಪದಗಳು ನಾವು ಕಲಿಯಲು ಆಗುತ್ತಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಗಾಂಧಿ ತತ್ವದಂತೆ ಒಂದು ಕೆನ್ನೆಗೆ ಹೊಡೆದರೇ ಮತ್ತೊಂದು ಕೆನ್ನೆ ತೋರಿಸು ಎಂಬ ಮಾತನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನಮ್ಮ ಸ್ವಾಭಿಮಾನ, ಮನಸಾಕ್ಷಿ ಒಪ್ಪುತ್ತಿಲ್ಲ. ಆದರೆ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸಗಳನ್ನು ಮಾಡದೆ ಇದ್ದರೆ ಅದೇ ನಾವು ನೀಡುವ ಗೌರವವಾಗುತ್ತದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ನಮ್ಮಿಂದ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಕೀಳರಿಮೆ ತೊರೆಯಬೇಕು. ನಾವು ದುರ್ಬಲರು ಎಂಬ ಭಾವನೆ ದೂರಾಗಬೇಕು’ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಿದರು.

ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ‘ಕಾಲೇಜುಗಳು ಸ್ವತಂತ್ರ್ಯ ಪೂರ್ವದಿಂದಲೂ ಹಳೆಯ ರೂಪುರೇಷೆಗಳಲ್ಲಿಯೇ ಸಾಗುತ್ತಿವೆ. ಇದನ್ನು ಬಿಟ್ಟು ಹೊಸ ಸಂಶೋಧನೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು’ ಎಂದರು.

ಉಪನ್ಯಾಸಕಾರದ ಎಂ.ಜೆ.ಮೋಹನ್‌ಕುಮಾರ್, ಆರ್.ಶಿವಯ್ಯ, ಲೋಕೇಶ್‌ನಾಯ್ಕ ಇದ್ದರು. ಸೆಮಿಸ್ಟರ್‌ಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !