ಸಮರ್ಪಕ ಸರ್ವೆ ನಡೆಸುವಂತೆ ಒತ್ತಾಯ

7
ಬೀಡಿ ಕಾರ್ಮಿಕರ ಚಿಕಿತ್ಸಾಲಯದ ಎದುರು ನೂರಾರು ಕಾರ್ಮಿಕರಿಂದ ಧರಣಿ

ಸಮರ್ಪಕ ಸರ್ವೆ ನಡೆಸುವಂತೆ ಒತ್ತಾಯ

Published:
Updated:
Deccan Herald

ತುಮಕೂರು: ಕಾರ್ಮಿಕ ಕಲ್ಯಾಣ ಸಂಘಟನೆ ಹಾಗೂ ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ರಾಷ್ಟ್ರದಾದ್ಯಂತ ನಡೆಸುತ್ತಿರುವ ಬೀಡಿ ಕಾರ್ಮಿಕರ ಸರ್ವೆ ಕಾರ್ಯವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಸುವಂತೆ ಒತ್ತಾಯಿಸಿ ಬೀಡಿ ಕಾರ್ಮಿಕರ ಚಿಕಿತ್ಸಾಲಯ ಎದುರು ನೂರಾರು ಬೀಡಿ ಕಾರ್ಮಿಕರು ಧರಣಿ ನಡೆಸಿದರು.

ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಬೀಡಿ ಕಾರ್ಮಿಕರು ಇದ್ದು, ಅವರಿಗೆ ಕಾನೂನು ಬದ್ಧವಾಗಿ ಗುರುತಿನ ಚೀಟಿಯನ್ನು ನೀಡದೆ ವಂಚಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಸ್ತುತ ನಡೆಯುತ್ತಿರುವ ಸರ್ವೆ ಕಾರ್ಯವನ್ನು ಬೀಡಿ ಕಾರ್ಮಿಕರು ಇರುವ ಪ್ರದೇಶಗಳಿಗೆ ತೆರಳಿ ನಡೆಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಧೂಮಪಾನ ನಿಷೇಧ ಕಾಯ್ದೆಯಿಂದ ಕೆಲಸ ಕಳೆದುಕೊಳ್ಳುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಪರಿಹಾರ ಮತ್ತು ಮಾಸಿಕ 5 ಸಾವಿರ ರೂಪಾಯಿ ಪಿಂಚಣಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ಹತ್ತಾರು ವರ್ಷಗಳ ಕಾಲ ಬೀಡಿ ಕಟ್ಟಿ ರೋಗ ರುಜನೆಗಳಿಂದ ನರಳುತ್ತಾ ನಿವೃತ್ತರಾಗುವ ಬೀಡಿ ಕಾರ್ಮಿಕರಿಗೆ ನಿವೃತ್ತಿಯ ನಂತರವು ವೈದ್ಯಕೀಯ ಸೇವೆ ಮುಂದುವರಿಸುವಂತೆ ಒತ್ತಾಯಿಸಿದರು.

ಈ ವೇಳೆ ಬೀಡಿ ಕಾರ್ಮಿಕರ ಚಿಕಿತ್ಸಾಲಯದ ವೈದ್ಯಾಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಈ ಸಂಬಂಧ ಕಲ್ಯಾಣ ಆಯುಕ್ತರಿಗೆ ತಿಳಿಸಿ ಅವರ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಶಹತಾಜ್, ಉಪಾಧ್ಯಕ್ಷ ಅಬ್ದುಲ್ ಮುನಾಫ್, ಮುಖಂಡರಾದ ಇಂತು, ಗಫರ್ದಾ, ಕುಲ್ಸುಂಬು, ನಸೀಮಾ, ಮದೀನಾ ಬೀ, ಪರೀದ್ ಸಾಬ್, ನಿಸಾರ್ ಅಹಮದ್, ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !