ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

Last Updated 22 ಸೆಪ್ಟೆಂಬರ್ 2021, 3:35 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಕಡಗತ್ತೂರು ಗ್ರಾಮದಿಂದ ಪಕ್ಕದ ಆಂಧ್ರಕ್ಕೆ ತೆರಳುವ ಫ್ಯಾಕ್ಟರಿ ನೌಕರರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಡಗತ್ತೂರು ಗ್ರಾಮದ ಆದಿ ಮಾತನಾಡಿ, ರಾಜ್ಯದಲ್ಲಿಯೇ ಉದ್ಯೋಗಮಾಡುವ ಆಸೆ ಇದ್ದರೂ ಯಾವುದೇ ಕೆಲಸವಿಲ್ಲ. ಪಕ್ಕದ ಆಂಧ್ರಪ್ರದೇಶದವರು ಗ್ರಾಮಗಳಲ್ಲಿನ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗಾಗಿ ಪ್ರತಿದಿನ ಹನುಮೇನಹಳ್ಳಿ ರಸ್ತೆ ಮಾರ್ಗವಾಗಿ ತೆರಳಬೇಕಾಗುತ್ತದೆ. ಆದರೆ ಇಲ್ಲಿನ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ಕಷ್ಟವಾಗಿದೆ ಎಂದರು.

ಹೋಬಳಿಯ ಕಡಗತ್ತೂರು-ಹನುಮೇನಹಳ್ಳಿ ರಸ್ತೆ ಮೂಲಕ ವಿವಿಧ ಹಳ್ಳಿಗಳಿಂದ ನಿತ್ಯ 100ಕ್ಕೂ ಹೆಚ್ಚು ಆಟೊ ಮತ್ತು 300ಕ್ಕಿಂತ ಅಧಿಕ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಇಲ್ಲಿನ ರಸ್ತೆ ಹಾಳಾಗಿರುವುದರಿಂದ ಮಳೆ ಬಂದಾಗ ಕೆಸರು ಗದ್ದೆಯಾಗುತ್ತದೆ. ಇದರಿಂದ ಈ ರಸ್ತೆ ಮೂಲಕ ಸಂಚರಿಸುವ ಆಟೊ, ದ್ವಿಚಕ್ರ ವಾಹನಗಳು ಬಿದ್ದು ಅನೇಕರು ಗಾಯಗೊಂಡಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಮನೆಗಳಲ್ಲಿ ಸಣ್ಣ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳುತ್ತೇವೆ. ಆದರೆ ಸಂಜೆ ಮನೆಗೆ ವಾಪಸ್ಸಾಗುವುದು ಗ್ಯಾರಂಟಿ ಇರುವುದಿಲ್ಲ. ಶಾಸಕರು, ಸಂಸದರು ಮತ್ತು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಅಭಿವೃದ್ಧಿಪಡಿಸಬೇಕು ಎಂದು ಕಡಗತ್ತೂರು ಗ್ರಾಮದ ಶ್ರೀನಾಥ್, ಅನಿಲ್, ಕಾಂತಮ್ಮ, ನಾಗಮಣಿ, ಗಂಗಾದೇವಿ, ಈಶ್ವರಮ್ಮ, ಹರೀಶ್, ನಾಗಗರಾಜು, ಮಧು, ಗಿರೀಶ್, ಪ್ರಸಾದ್, ಕಿರಣ್ ಕುಮಾರ್, ಮಂಜುನಾಥ್, ಗೋವಿಂದರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT