ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಲು ಪ್ರತಿಭಟನೆ

Last Updated 22 ಡಿಸೆಂಬರ್ 2021, 4:47 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಎಡೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಧುರೈ ಗ್ರಾಮದ ಪಕ್ಕದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸುತ್ತಿರುವುದನ್ನು ಗ್ರಾಮಸ್ಥರು ಮಂಗಳವಾರ ಪ್ರತಿಭಟಿಸಿ, ಸ್ಥಳಾಂತರಿಸಲು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಮುಖಂಡ, ಡಿ.ಜಿ.ಕೃಷ್ಣಪ್ಪ, ಈ ಹಿಂದೆ ರಾಗಿಹಳ್ಳಿ ಸಮೀಪದ ವೈ.ಹಂಪಪುರದಲ್ಲಿ ಎರಡು ಎಕರೆ ಜಮೀನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರಾಗಿದೆ.ಆದರೆ ಅಲ್ಲಿ ಪ್ರಾರಂಭ ಮಾಡದೆ, ದೊಡ್ಡಮಧುರೈ ಗ್ರಾಮದಲ್ಲಿ ಮಾಡುತ್ತಿದ್ದಾರೆ. ದೊಡ್ಡ ಮಧುರೈ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲು ಉದ್ದೇಶಿಸಿರುವ ಜಮೀನಿನ ಬಳಿ ಶಾಲೆ, ಹೇಮಾವತಿ ನಾಲಾ ಕಾಲುವೆ, ರಾಜ್ಯ ಹೆದ್ದಾರಿಗಳಿದ್ದು, ಪರಿಸರಕ್ಕೆ ಮಾರಕವಾದ ಕಾರಣ ಸ್ಥಳಾಂತರಿಸಬೇಕು
ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಚೂಡಾಮಣಿ ವೆಂಕಟೇಶ್, ಲಕ್ಷ್ಮಣ, ಮುಖಂಡ ಅಲೋಕ್, ರವಿ, ಗಂಗಣ್ಣ, ಪಾತರಾಜು, ಮೋಹನ್, ಮಹೇಶ್, ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT