ಕ್ರಮಬದ್ಧ ಜೀವನದಿಂದ ಮಾನಸಿಕ ನೆಮ್ಮದಿ: ಪ್ರೊ.ವೈ.ಎಸ್.ಸಿದ್ದೇಗೌಡ

7
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ

ಕ್ರಮಬದ್ಧ ಜೀವನದಿಂದ ಮಾನಸಿಕ ನೆಮ್ಮದಿ: ಪ್ರೊ.ವೈ.ಎಸ್.ಸಿದ್ದೇಗೌಡ

Published:
Updated:
Deccan Herald

ತುಮಕೂರು: ಕ್ರಮಬದ್ಧ ಜೀವನವಿಲ್ಲದೆ ಇಂದು ದೇಶದಲ್ಲಿ ಶೇ 90 ರಷ್ಟು ಜನ ಮಾನಸಿಕವಾಗಿ ಕುಬ್ಜರಾಗುತ್ತಿದ್ದಾರೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನೇಹ ಮನೋವಿಕಾಸ ಕೇಂದ್ರ ಮತ್ತು ಸೇಜಲ್‌ ನ್ಯೂ ಲೈಫ್‌ ಫೌಂಡೇಷನ್‌, ವಿವಿಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ, ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ’ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮೆರಿಕ ಮತ್ತು ಭಾರತೀಯ ಸಂಸ್ಕೃತಿಗಳ ನಡುವೆ ವ್ಯತ್ಯಾಸವಿದೆ. ಇದರ ಅಂತರವನ್ನು ಅರಿತು ನಮ್ಮ ಸಂಸ್ಕೃತಿ ಹಿನ್ನೆಲೆಯಲ್ಲಿ ಯುವಜನರು ಸಾಮಾಜಿಕ, ಆಧ್ಯಾತ್ಮಿಕ, ನೈತಿಕ ಮತ್ತು ಮಾನಸಿಕ ಮೌಲ್ಯಗಳನ್ನು ವೃದ್ದಿ ಮಾಡುವುದರ ಮೂಲಕ ಸದೃಢ ಆರೋಗ್ಯ ನಿರ್ಮಿಸಲು ಉತ್ತಮ ಆಲೋಚನೆ ಹಾಗೂ ಧ್ಯೇಯಗಳನ್ನು ಎತ್ತಿ ಹಿಡಿಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ರೋಗತಜ್ಞ ಡಾ.ಶರತ್ ವಿಶ್ವರಾಜ್‌ ಮಾತನಾಡಿ, ಯುವಜನರು ಇಂದು ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಭಾವೋದ್ವೇಗಕ್ಕೆ ಒಳಗಾಗಿ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ ಎಂದರು.

ಅನುಭಾವತ್ಮಕ ಕಲಿಕೆ ಮತ್ತು ವರ್ತನೆ ಮಾರ್ಪಾಡು ಮಾಡಿಕೊಳ್ಳುವುದರ ಮೂಲಕ ಹಾಗೂ ಆಪ್ತ ಸಮಾಲೋಚನೆ ವಿವಿಧ ಸಂಘ ಸ್ವಯಂ ಸೇವಾ ಸಂಸ್ಥೆಗಳ ನೆರವನ್ನು ಪಡೆದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !