ಉತ್ತಮ ಸಿನಿಮಾ ವೀಕ್ಷಣೆಯಿಂದ ಮನೋವಿಕಾಸ

7
ಬಾಲಭವನದಲ್ಲಿ ವಾರಾಂತ್ಯದ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದ ಎಂ.ಬಸವಯ್ಯ ಹೇಳಿಕೆ

ಉತ್ತಮ ಸಿನಿಮಾ ವೀಕ್ಷಣೆಯಿಂದ ಮನೋವಿಕಾಸ

Published:
Updated:
Deccan Herald

ತುಮಕೂರು: ಉತ್ತಮ ಸಿನಿಮಾ ವೀಕ್ಷಣೆಯಿಂದ ಮಕ್ಕಳ ಮನೋವಿಕಾಸವಾಗುತ್ತದೆ ಎಂದು ಜಿಲ್ಲಾ ಬಾಲಭವನ ಸಂಘದ ಸದಸ್ಯ ಎಂ.ಬಸವಯ್ಯ ಹೇಳಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಂಘ, ಜಿಲ್ಲಾ ಬಾಲಭವನ ಸೊಸೈಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ಧ ‘ವಾರಾಂತ್ಯ ಸಿನಿಮಾ–2018’ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

’ಬಾಲಭವನದ ಆಶ್ರಯದಲ್ಲಿ ಪ್ರತಿ ಶನಿವಾರ ಮಕ್ಕಳಿಗಾಗಿ ಸಿನಿಮಾ ಪ್ರದರ್ಶನ ಆಯೋಜಿಸಿದ್ದೇವೆ. ಇಲ್ಲಿ ಸಿನಿಮಾಗಳನ್ನು ಮಕ್ಕಳು ಗಮನವಿಟ್ಟು ನೋಡಿದರೆ ಹೊಸ ರೀತಿಯ ಆಲೋಚನೆಗಳು ಹೊಳೆಯುತ್ತವೆ’ ಎಂದರು.

‘ದೃಶ್ಯ ಮಾಧ್ಯಮಗಳು ಮಕ್ಕಳ ಮೇಲೆ ಬೀರುವ ಪರಿಣಾಮವೇ ಬೇರೆ. ಮಕ್ಕಳು ಇಂಟರ್‌ನೆಟ್, ಮೊಬೈಲ್‌ಗಳ ಬಳಕೆಯಿಂದ ಆದಷ್ಟು ದೂರ ಇರಬೇಕು. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಬೇಕು. ಹೊಸ ಅಲೆಯ ಚಿತ್ರಗಳನ್ನು ನೋಡಬೇಕು’ ಎಂದು ಹೇಳಿದರು.

’ಬಾಲ ಭವನದಲ್ಲಿ ಮುಂದಿನ ದಿನಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಮಕ್ಕಳ ನಾಟಕಗಳು, ನಾಟಕೋತ್ಸವಗಳನ್ನು ನಡೆಸುತ್ತೇವೆ. ಇದು ಮಕ್ಕಳ ಜ್ಞಾನ ವಿಕಾಸಕ್ಕೆ ಹೆಚ್ಚು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ಮಕ್ಕಳ ಸಿನಿಮಾ ಆಯೋಜಿಸಲು ಹೊರಟಿರುವ ಬೆನ್ನಲ್ಲೇ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆಯಾಗಿದೆ’ ಎಂದರು.

ಜೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಮಾತನಾಡಿ,‘ ವಾರಾಂತ್ಯದಲ್ಲಿ ಮಕ್ಕಳ ಸಿನಿಮಾ ಪ್ರದರ್ಶನ ಆಯೋಜಿಸುವ ಮೂಲಕ ಬಾಲಭವನ ಉತ್ತಮ ಕೆಲಸಕ್ಕೆ ನಾಂದಿ ಹಾಡಿದೆ. ಇದು ಆಂದೋಲನದ ಸ್ವರೂಪ ಪಡೆಯಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಮಮತಾ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !