ಪಿಯುಸಿ; 22ರಿಂದ 17ಕ್ಕೆ ಏರಿದ ತುಮಕೂರು ಜಿಲ್ಲೆ

ಮಂಗಳವಾರ, ಏಪ್ರಿಲ್ 23, 2019
27 °C
ವಿದ್ಯಾವಾಹಿನಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರಜ್ಞಾ ಸತೀಶ್ ರಾಜ್ಯಕ್ಕೆ 3ನೇ ರ‍್ಯಾಂಕ್

ಪಿಯುಸಿ; 22ರಿಂದ 17ಕ್ಕೆ ಏರಿದ ತುಮಕೂರು ಜಿಲ್ಲೆ

Published:
Updated:
Prajavani

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯು ಶೇ 65.81 ರಷ್ಟು ಫಲಿತಾಂಶ ಗಳಿಸಿದ್ದು, ರಾಜ್ಯ ಮಟ್ಟದಲ್ಲಿ 17ನೇ ಸ್ಥಾನಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಾಲ್ಕು ಸ್ಥಾನ ಎತ್ತರಕ್ಕೇರಿದೆ. ಈ ವರ್ಷ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ತೇರ್ಗಡೆಯಾಗಿದ್ದಾರೆ.

ಕಳೆದ ವರ್ಷ (2018) ಶೇ 64.29 ಫಲಿತಾಂಶ ಗಳಿಸಿ ರಾಜ್ಯ ಮಟ್ಟದಲ್ಲಿ 21ನೇ ಸ್ಥಾನ ಪಡೆದಿತ್ತು. 2017ರಲ್ಲಿ 22ನೇ ಸ್ಥಾನವನ್ನು ಜಿಲ್ಲೆಯು ‍ಪಡೆದಿತ್ತು.  ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಸೇರಿ ಜಿಲ್ಲೆಯಲ್ಲಿ ಒಟ್ಟು 22,914 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 15,079 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗರತ್ನಾ ತಿಳಿಸಿದ್ದಾರೆ.

ನಗರ– ಗ್ರಾಮೀಣ ಪ್ರದೇಶ: ನಗರ ಪ್ರದೇಶದ 17,386 ವಿದ್ಯಾರ್ಥಿಗಳಲ್ಲಿ 11,406(ಶೇ 65.06), ಗ್ರಾಮೀಣ ಪ್ರದೇಶದ 5,528 ವಿದ್ಯಾರ್ಥಿಗಳಲ್ಲಿ 3,673 (ಶೇ 66.44) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಷಯವಾರು ಫಲಿತಾಂಶ: ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 6,311 ರಲ್ಲಿ 3642 (ಶೇ 57.71), ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 7,132 ರಲ್ಲಿ 4,765 (ಶೇ 66.81), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 9,471 ವಿದ್ಯಾರ್ಥಿಗಳಲ್ಲಿ 6,672 (ಶೇ 70.45) ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ 3ನೇ ಟಾಪರ್: 'ವಿದ್ಯಾವಾಹಿನಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಸತೀಶ್ ಅವರು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿ ರಾಜ್ಯಕ್ಕೆ 3ನೇ ಟಾಪರ್ ಆಗಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಕೆ.ಬಿ.ಹೇಮಂತ್ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 589 ಅಂಕಗಳಿಸಿದ್ದಾರೆ' ಎಂದು ಕಾಲೇಜಿನ ಕಾಲೇಜಿನ ಕಾರ್ಯದರ್ಶಿ ಪ್ರದೀಪ್‌ಕುಮಾರ್ ತಿಳಿಸಿದರು.

'ವಿದ್ಯಾರ್ಥಿಗಳ ಈ ಯಶಸ್ಸಿನಿಂದ ಸಂತೋಷವಾಗಿದೆ. ಅವರ ನಿರಂತರ ಪರಿಶ್ರಮ ಮತ್ತು ಉಪನ್ಯಾಸಕರ ಸೂಕ್ತ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗಿದೆ’ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.

ವಿದ್ಯಾನಿಧಿ ಕಾಲೇಜಿಗೆ ಉತ್ತಮ ಫಲಿತಾಂಶ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ವಿದ್ಯಾನಿಧಿ ಕಾಲೇಜು ಉತ್ತಮ ಫಲಿತಾಂಶ ಗಳಿಸಿದೆ.
ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ಹೆಬ್ಬಾರ– 587, ರಾಜೇಶ್ವರಿ– 584, ಶ್ರೀಕೃಷ್ಣ–583, ಸಿ.ಎನ್.ವಿದ್ಯಾ – 581, ಶ್ರೀವಲ್ಲಿ– 581 ಅಂಕಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಿ.ಎ.ಹೇಮಂತ್ –581, ಎಸ್.ರಕ್ಷಿತಾ– 579, ಅಮೋಘ್– 573, ಟಿ.ಕೆ.ರಚನಾ– 571, ಸಿ.ಬಿ.ನಿಶು– 569 ಅಂಕಗಳಿಸಿದ್ದಾರೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 90 ಮಂದಿ ಅತ್ಯುನ್ನತ ಶ್ರೇಣಿ, 225 ಮಂದಿ ಪ್ರಥಮ ಶ್ರೇಣಿ, 69 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರದಲ್ಲಿ 7, ಸಂಖ್ಯಾಶಾಸ್ತ್ರದಲ್ಲಿ 5, ವ್ಯವಹಾರ ಅಧ್ಯಯನದಲ್ಲಿ 1, ವಿಜ್ಞಾನ ವಿಭಾಗದಲ್ಲಿ ಗಣಿತದಲ್ಲಿ 5, ಗಣಕ ವಿಜ್ಞಾನದಲ್ಲಿ 4, ರಸಾಯನ ವಿಜ್ಞಾನದಲ್ಲಿ 3 ಮಂದಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್ ತಿಳಿಸಿದ್ದಾರೆ.

’ಫಲಿತಾಂಶ ತೃಪ್ತಿಯಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಾಧನೆ ವಿದ್ಯಾರ್ಥಿಗಳು ಮಾಡಲಿ’ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ ಶುಭ ಕೋರಿದ್ದಾರೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !