ರಾಜಕೀಯ ಜ್ಞಾನವಿಲ್ಲದ ಯುವ ಪೀಳಿಗೆ

7
ರಾಜ್ಯಶಾಸ್ತ್ರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಡಾ.ಸಂದೀಪ್ ಶಾಸ್ತ್ರಿ ಬೇಸರ

ರಾಜಕೀಯ ಜ್ಞಾನವಿಲ್ಲದ ಯುವ ಪೀಳಿಗೆ

Published:
Updated:
Deccan Herald

ತುಮಕೂರು: ‘ಇಂದಿನ ಮಕ್ಕಳು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದಲೇ ಯುವ ಪೀಳಿಗೆಯಲ್ಲಿ ರಾಜಕೀಯ ಜ್ಞಾನ ಕಡಿಮೆ ಇರುವುದನ್ನು ಕಾಣುತ್ತಿದ್ದೇವೆ’ ಎಂದು ರಾಜಕೀಯ ವಿಶ್ಲೇಷಕ ಹಾಗೂ ಜೈನ್ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಸಂದೀಪ್ ಶಾಸ್ತ್ರಿ ತಿಳಿಸಿದರು.

ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಸಂಘ, ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ  ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನೇ ಹೆಚ್ಚು ಆರಿಸಿಕೊಳ್ಳುತ್ತಿರುವುದರಿಂದಲೂ ಅವರಿಗೆ ರಾಜಕೀಯ ಜ್ಞಾನವಿಲ್ಲ ಎಂದು ತಿಳಿಸಿದರು.

ಒಂದೇ ದೇಶ, ಒಂದೇ ಚುನಾವಣೆ ಎಂಬ ವಿಷಯದ ಬಗ್ಗೆ ಎಲ್ಲಡೆ ವ್ಯಾಪಕ ಚರ್ಚೆ ಆಗುತ್ತಿದೆ. ಇದು ನಡೆದರೆ ಸುಮಾರು 59 ತಿಂಗಳ ಕಾಲ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಡಕು ಉಂಟಾಗುವುದಿಲ್ಲ ಎಂಬ ವಾದವು ಅಲ್ಲಲ್ಲಿ ಕೇಳಿ ಬರುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್.ನಾಗರತ್ನ ಮಾತನಾಡಿ, ರಾಜ್ಯಶಾಸ್ತ್ರದ ಬಗ್ಗೆ ಮಕ್ಕಳಿಗೆ ತಿಳಿಸಲು ಈ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ವಿದ್ಯಾರ್ಥಿಗಳ ಜತೆಗೆ ಸಾರ್ವಜನಿಕರಿಗೆ ಕಾನೂನು, ಸಂವಿಧಾನದ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮವಾದುದು ಎಂದರು.

ಜಿಲ್ಲಾ ರಾಜ್ಯಶಾಸ್ತ್ರ ಸಂಘದ ಅಧ್ಯಕ್ಷ ಬಿ.ಯು.ಚಂದ್ರಶೇಖರಯ್ಯ ಮಾತನಾಡಿ, ಸಂಘವು 24 ವರ್ಷಗಳಿಂದ ಸಕ್ರಿಯವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಮಕ್ಕಳಿಗೆ ರಾಜಕೀಯ ಬಗ್ಗೆ ತಿಳಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಪ್ರಥಮ ಸ್ಥಾನ ಪಡೆದ ತಿಪಟೂರಿನ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರವಿಕುಮಾರ್ ಹಾಗೂ ನಿವೃತ್ತ ಉಪನ್ಯಾಸಕ ಗಂಗಣ್ಣ ಅವರನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ರಮೇಶ್ ಆರ್.ಬೀಳಗಿ, ಪ್ರಾಂಶುಪಾಲ ಡಾ.ಡಿ.ಎನ್.ಯೋಗೀಶ್ವರಪ್ಪ, ಸಂಘದ ಕಾರ್ಯದರ್ಶಿ ಎಂ.ವಿ.ಅಜಯ್ ಕುಮಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪರಶಿವಮೂರ್ತಿ, ಸಂಘದ ಮಾಜಿ ಅಧ್ಯಕ್ಷ ರಂಗಪ್ಪ, ಕಾರ್ಯಾಧ್ಯಕ್ಷ ಎಸ್.ಕುಮಾರಯ್ಯ, ಖಜಾಂಚಿ ಟಿ.ಜೆ.ಜ್ಯೋತಿಪ್ರಕಾಶ್, ಕಾವ್ಯಾ, ರಘು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !