ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಚೇರಿಯಲ್ಲಿ ಮುಂದಿನ ಸಿ.ಎಂ ಫೋಟೊ ಹಾಕಿ: ಸಚಿವ ವಿ. ಸೋಮಣ್ಣ

ಸಂಸದರ ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದ ಸಚಿವ ವಿ. ಸೋಮಣ್ಣ
Published : 18 ಆಗಸ್ಟ್ 2024, 6:04 IST
Last Updated : 18 ಆಗಸ್ಟ್ 2024, 6:04 IST
ಫಾಲೋ ಮಾಡಿ
Comments

ತುಮಕೂರು: ಮುಂದೆ ಯಾರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅವರ ಭಾವಚಿತ್ರವನ್ನು ತುಮಕೂರಿನಲ್ಲಿ ಹೊಸದಾಗಿ ತೆರೆಯಲಾಗಿರುವ ಸಂಸದರ ಕಚೇರಿಯಲ್ಲಿ ಹಾಕುವಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಮ್ಮ ಸಿಬ್ಬಂದಿಗೆ ಸಲಹೆ ಮಾಡಿದ್ದಾರೆ.‌

ಪ್ರವಾಸಿ ಮಂದಿರದಲ್ಲಿ ಹೊಸದಾಗಿ ಆರಂಭಿಸಿರುವ ಕಚೇರಿಗೆ ಶನಿವಾರ ಭೇಟಿ ನೀಡಿದ ಸಮಯದಲ್ಲಿ ಅವರು ಈ ರೀತಿ ಹೇಳಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕಚೇರಿಯಲ್ಲಿ ಮಾಡಿರುವ ಸಿದ್ಧತೆ ಪರಿಶೀಲಿಸಿದ ಸಮಯದಲ್ಲಿ ಕಚೇರಿ ಪಡಸಾಲೆ ಗೋಡೆಗೆ ಮುಂದಿನ ಮುಖ್ಯಮಂತ್ರಿಯ ಭಾವಚಿತ್ರ ಹಾಕುವಂತೆ ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ.

ವಿವಾದ ಅಂತ್ಯ: ಪ್ರವಾಸಿ ಮಂದಿರದಲ್ಲಿ ಸಂಸದರ ಕಚೇರಿ ತೆರೆಯಲು ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಆ.16ರಂದು ವಾಪಸ್ ಪಡೆದಿತ್ತು. ಮತ್ತೆ ಒಂದೇ ದಿನದಲ್ಲಿ ಕಚೇರಿ ಆರಂಭಿಸಲು ಈಗ ಅನುಮತಿ ನೀಡಿದ್ದು ಕಗ್ಗಂಟಾಗಿದ್ದ ಸಮಸ್ಯೆ ಬಗೆಹರಿದಿದೆ.

ಪ್ರವಾಸಿ ಮಂದಿರದಲ್ಲಿ ಸಂಸದರ ಕಚೇರಿ ತೆರೆಯಲು ಅವಕಾಶ ನೀಡಿದ್ದಕ್ಕೆ ಸಿಟ್ಟಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಅನುಮತಿ ರದ್ದುಪಡಿಸಿದ್ದರು. ಇದಕ್ಕೆ ಮೈತ್ರಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಶನಿವಾರ ಪರಮೇಶ್ವರ ಅವರನ್ನು ಸೋಮಣ್ಣ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿದರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸಂಸದರ ಕಚೇರಿ ಆರಂಭಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿದಿದೆ. ಪ್ರವಾಸಿ ಮಂದಿರದಲ್ಲೇ ಕಚೇರಿ ಕೆಲಸ ಮುಂದುವರಿಯುತ್ತವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT