ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಮಯ್ಯ ಕಾದಂಬರಿ ಒಂದು ಅನನ್ಯ ಕೃತಿ: ಡಾ.ರಾಜಪ್ಪ

Last Updated 20 ಜನವರಿ 2023, 11:10 IST
ಅಕ್ಷರ ಗಾತ್ರ

ಶಿರಾ: ಶಿರಾ ಸೀಮೆಯ ಭೌಗೋಳಿಕ ಪ್ರದೇಶ, ಭಾಷೆ, ಬದುಕು ಮತ್ತು ಸಂವೇದನೆಯನ್ನು ಒಳಗೊಂಡ ಪುಟ್ಟಮಯ್ಯ ಕಾದಂಬರಿ ಒಂದು ಅನನ್ಯ ಕೃತಿಯಾಗಿದೆ ಎಂದು ವಿಮರ್ಶಕ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.

ನಗರದ ರಂಗನಾಥ ಕಾಲೇಜು ಆವರಣದಲ್ಲಿ ಪ್ರೊ.ಕಟಾವೀರನಹಳ್ಳಿ ನಾಗರಾಜರ ಅವರ ಪುಟ್ಟಮ್ಮಯ್ಯ ಕಾದಂಬರಿ ಲೋಕಾರ್ಪಣೆಯ ಬಳಿಕ ಕಾದಂಬರಿ ಕುರಿತು ಮಾತನಾಡಿದರು. ಯಾವುದೇ ಕೃತಿಗೆ ಪ್ರಾದೇಶಿಕತೆ ಬಹಳ ಮುಖ್ಯ,

ನಿವೃತ್ತ ಕನ್ನಡ ಪ್ರೊಫೆಸರ್ ಆಗಿರುವ ನಾಗರಾಜು ಅವರು ತಮ್ಮದೇ ವಿಭಿನ್ನ ರೀತಿಯ ಪುಸ್ತಕ ಅಭಿರುಚಿ ಬೆಳೆಸಿಕೊಂಡು ಬಂದಿರುವುದು ಈ ಕೃತಿಯ ರಚನೆಯಲ್ಲೂ ಕಂಡುಬರುತ್ತದೆ ಎಂದರು.

ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಮೀರಸಾಬಿಹಳ್ಳಿ ಶಿವಣ್ಣ ಮೂಲತಃ ಕವಿಯಾಗಿ ಕವನ ಸಂಕಲನ ಪ್ರಕಟಿಸಿರುವ‌ ಪ್ರೊ.ನಾಗರಾಜು ತಮ್ಮ ಇಳಿವಯಸ್ಸಿನಲ್ಲಿ ಕಾದಂಬರಿ ರಚಿಸಿದ್ದು ನನಗೆ ಅಚ್ಚರಿ ವಿಷಯವಾಗಿದೆ ಎಂದರು.

ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಜನ್ನಪ್ಪ ಮಾತನಾಡಿ ಈ ಕಾದಂಬರಿಯಲ್ಲಿ ಬರುವ ಕಟಾವೀರನಹಳ್ಳಿಯ ಪರಿಸರ ಮತ್ತು ಪಾತ್ರಗಳು ನನ್ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿವೆ ಎಂದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪ್ರೊ.ಕೆ.ಹನುಮಂತರಾಯಪ್ಪ, ಕವಿಯತ್ರಿ ಕೆ.ಎಸ್.ಉಮಾದೇವಿ ಗ್ಯಾರಳ್ಳ, ತುಮಕೂರು ವಿದ್ಯೋದಯ ಕಾಲೇಜು ಆಡಳಿತಾಧಿಕಾರಿ ಪ್ರೊ.ಕೆ.ಚಂದ್ರಣ್ಣ, ಜಿ.ಪಂ ಮಾಜಿ ಸದಸ್ಯ ಅರೇಹಳ್ಳಿ ರಮೇಶ್, ಸಾಮಾಜಿಕ ಚಿಂತಕ ‌ಶಿರಾ ನಾಗೇಶ್ ಬಾಬು, ನಿವೃತ್ತ ಪ್ರಾಂಶುಪಾಲ ಮಹೇಂದ್ರಪ್ಪ, ಶಿಕ್ಷಕ ರಾಮರಾಜು, ರಂಗಕರ್ಮಿ ಗೋಮಾರದಹಳ್ಳಿ ಪಿ.ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ನರೇಶ್ ಬಾಬು, ಉಪನ್ಯಾಸಕ ಹೆಂದೊರೆ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT