ಗುರುವಾರ , ಸೆಪ್ಟೆಂಬರ್ 24, 2020
27 °C

ರಾಯರ ಆರಾಧನಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 3 ದಿನಗಳಿಂದ ಮಂತ್ರಾಲಯದ ಸಂಪ್ರದಾಯದಂತೆ ನಡೆಯುತ್ತಿದ್ದ ರಾಘವೇಂದ್ರ ಸ್ವಾಮಿಗಳ ವೈಭವದ 349ನೇ ಆರಾಧನಾ ಮಹೋತ್ಸವ ಗುರುವಾರ ವಿಧ್ಯುಕ್ತವಾಗಿ ಮುಕ್ತಾಯವಾಯಿತು.

ಸಂಪ್ರದಾಯದಂತೆ ಮೊದಲ ದಿನ ಮೂಲ ಬೃಂದಾವನಕ್ಕೆ ಗಂಧದ ಲೇಪನ ಮಾಡಿ ಎರಡನೆಯ ದಿನ ಅಯೋಧ್ಯೆಯ ಶ್ರೀರಾಮನ ದೇವಾಲಯದ ಮೂಲನಕ್ಷೆಯನ್ನು ಇಟ್ಟು ಪಂಚಾಮೃತ ಅಭಿಷೇಕ ಮಾಡಲಾಯಿತು. ಮೂಲ ರಾಮನನ್ನು ಪೂಜಿಸಿ ಬೃಂದಾವನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಸರಳವಾಗಿ ತೊಟ್ಟಿಲು ಸೇವೆ ನೆರವೇರಿಸಲಾಯಿತು.

ಗುರುವಾರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಿತು. ಭಕ್ತರು ಸರದಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ರಾಯರ ದರ್ಶನ ಪಡೆದರು. ಬದರೀನಾಥ್ ಜೋಷಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಕಾರ್ಯದರ್ಶಿ ಪುಟ್ಟಣ್ಣ, ನಿರ್ದೇಶಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು