ಹುಲಿಯೂರುದುರ್ಗ: ಬಿರುಗಾಳಿ ಮಳೆಗೆ ಉರುಳಿದ ವಿದ್ಯುತ್ ಸ್ತಂಭಗಳು

ಮಂಗಳವಾರ, ಜೂನ್ 25, 2019
25 °C

ಹುಲಿಯೂರುದುರ್ಗ: ಬಿರುಗಾಳಿ ಮಳೆಗೆ ಉರುಳಿದ ವಿದ್ಯುತ್ ಸ್ತಂಭಗಳು

Published:
Updated:
Prajavani

ಹುಲಿಯೂರುದುರ್ಗ: ಹೋಬಳಿಯ ರಾಜೇಂದ್ರ ಪುರ ಗ್ರಾಮದಲ್ಲಿ ಬುಧವಾರ ಭಾರೀ ಬಿರುಗಾಳಿ ಮಳೆಗೆ ವಿದ್ಯುತ್ ಸ್ತಂಭಗಳು ನೆಲಕ್ಕುರುಳಿದವು, ತೆಂಗಿನ ಮರಗಳು ಬುಡ ಮೇಲಾದವು. ಮನೆ ಚಾವಣಿಯವ ಹೊದಿಕೆಗಳು ಹಾರಿ ಹೋದವು.

ತೀವ್ರವಾಗಿ ಬೀಸಿದ ಗಾಳಿ ಜೋರಾಗಿ ಸುರಿಯಬೇಕಿದ್ದ ಮಳೆಯ ಪ್ರಮಾಣವನ್ನು ಕಡಿಮೆ ಮಾಡಿತು. ಇದರಿಂದ ಜನರು ಅತೃಪ್ತಿ ವ್ಯಕ್ತಪಡಿಸಿದರು.

ಹುಲಿಯೂರುದುರ್ಗ ಸೇರಿದಂತೆ ಗೊಲ್ಲರಹಟ್ಟಿ, ಸೀಗೇಪಾಳ್ಯ, ಮಾದಪ್ಪನಹಳ್ಳಿ, ಡಿ.ಹೊಸಹಳ್ಳಿ ಸಿಂಗೋನಹಳ್ಳಿ, ವಾಜರಪಾಳ್ಯ, ಬೀಚನಹಳ್ಳಿ, ಹಳೇವೂರು, ಮೆಣಸಕೆರೆದೊಡ್ಡಿ, ನಂಜೇಗೌಡನದೊಡ್ಡಿ, ಕುಂಟಯ್ಯನಪಾಳ್ಯ ಗ್ರಾಮಗಳಲ್ಲಿ ಕೂಡ ಗಾಳಿ ಹಾಗೂ ಮಳೆಯ ಆರ್ಭಟ ಜೋರಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !