ಮಂಗಳವಾರ, ಅಕ್ಟೋಬರ್ 22, 2019
21 °C

ಹಬ್ಬದ ವೇಳೆ ಸುರಿದ ಮಳೆ; ತಂದಿತು ಸಂತಸ

Published:
Updated:
Prajavani

ಕೊಡಿಗೇನಹಳ್ಳಿ (ಮಧುಗಿರಿ ತಾ.): ದಸರಾ ಹಬ್ಬದ ಸಮಯದಲ್ಲಿ ಸೋಮವಾರ ಮುಂಜಾನೆ ಸುರಿದ ಬಾರಿ ಮಳೆಯಿಂದ ಜನರು ಹಬ್ಬ ಮಾಡಿದಷ್ಟೇ ಬಾರಿ ಖುಷಿಪಟ್ಟರು.

ಕೊಡಿಗೇನಹಳ್ಳಿ ಭಾಗದಲ್ಲಿ ವಾರದಿಂದ ಆಗಾಗ ಸಾಧಾರಣವಾಗಿ ಮಳೆ ಬೀಳುತ್ತಿತ್ತು. ಆದರೆ, ದಸರ ಹಬ್ಬದ ಮುಂಜಾನೆ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳ ತುಂಬಿ ಕೆರೆ-ಕುಂಟೆಗಳಿಗೆ ನೀರು ಹರಿದ ಪರಿಣಾಮ ಹಬ್ಬದ ಸಿದ್ಧತೆಯಲ್ಲಿದ್ದ ಜನ ಸಂತುಷ್ಟರಾದರು. ಹಿಂದಿನ ವರ್ಷ ಭೀಕರ ಬರಗಾಲದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಪರದಾಡಿದ್ದರು. ಈ ವರ್ಷದ ಮುಂಗಾರು ಆರಂಭದಲ್ಲಿ ಕೈಕೊಟ್ಟಿದ್ದರಿಂದ ಮುಂದೆ ಎಂತಹ ದಿನಗಳನ್ನು ಕಾಣಬೇಕೋ ಎಂಬ ರೈತರನ್ನು ಚಿಂತೆ ಕಾಡುತ್ತಿತ್ತು. 

ಆದರೆ, ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಕಾಲುವೆಗಳ ಮುಖಾಂತರ ಕೆರೆ-ಕುಂಟೆಗಳತ್ತ ನೀರು ಹರಿಯಿತು. ಜನರು ಕುಣಿದು ಕುಪ್ಪಳಿಸಿ ಸೆಲ್ಫಿಗಳನ್ನು ತೆಗೆದುಕೊಂಡು ಖುಷಿಪಟ್ಟರು.

ಇನ್ನು ಮಳೆಯಿಂದ ಈ ವರ್ಷ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ತೊಂದರೆಯಾಗುವುದಿಲ್ಲ. ಕೆಲ ಕುಂಟೆ ಮತ್ತು ಕೆರೆಗಳಿಗೆ ನೀರು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗಿ ಎಲ್ಲ ಕೆರೆ-ಕಟ್ಟೆಗಳು ತುಂಬಿ ಹರಿದರೆ ರೈತರು ಇನ್ನಷ್ಟು ಧೈರ್ಯದಿಂದ ಕೃಷಿ ಮಾಡಬಹುದು ಎಂದು ಕೆಲವರು ಸಂತಸ ಹಂಚಿಕೊಂಡರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)