ಭಾನುವಾರ, ಮಾರ್ಚ್ 26, 2023
23 °C

ಮಧುಗಿರಿ: ಮಳೆಯಿಂದಾಗಿ ಬೆಳೆಗೆ ಜೀವ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತಾಲ್ಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕೆರೆ, ಕಟ್ಟೆ, ಹಳ್ಳ ಹಾಗೂ ಕಾಲುವೆಗಳಲ್ಲಿ ನೀರು ಹರಿದಿದೆ. ರೈತರ ಮುಖದಲ್ಲಿ ಸಂತಸ ಮೂಡಿದೆ.

ಪಟ್ಟಣದಲ್ಲಿ 63 ಮಿ.ಮೀ., ಮಿಡಗೇಶಿಯಲ್ಲಿ 90 ಮಿ.ಮೀ., ಐ.ಡಿ.ಹಳ್ಳಿಯಲ್ಲಿ 93 ಮಿ.ಮೀ., ಕೊಡಿಗೇನಹಳ್ಳಿಯಲ್ಲಿ 59 ಮಿ.ಮೀ. ಮಳೆಯಾಗಿದೆ.

ತಾಲ್ಲೂಕಿನ ಮಿಡಿಗೇಶಿ ಹಾಗೂ ಐ.ಡಿ.ಹಳ್ಳಿ ಹೋಬಳಿಯಲ್ಲಿ ಶೇಂಗಾ, ರಾಗಿ, ಅವರೆ, ಮೆಕ್ಕೆಜೋಳ ಬೆಳೆಗಳು ಮಳೆಯಿಲ್ಲದೇ ಒಣಗುವ ಹಂತ ತಲುಪಿದ್ದವು. ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಳೆಗಳಿಗೆ ಜೀವ ಕಳೆ ಬಂದಿದೆ.

ಚೋಳೇನಹಳ್ಳಿ, ಬಿದರಕೆರೆ, ಮಿಡಿಗೇಶಿ, ರೆಡ್ಡಿಹಳ್ಳಿ, ಹನುಮಂತಪುರ, ಬೇಡತ್ತೂರು, ಹೊಸಕೆರೆ ಗ್ರಾಮದ ಕೆರೆ ಹಾಗೂ ಕಟ್ಟೆಗಳಿಗೆ ನೀರು ಹರಿದಿದೆ. 

ಪಟ್ಟಣದ ಪಾವಗಡ ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆ ಮಧ್ಯಭಾಗದಲ್ಲಿ ಗುಂಡಿ ಬಿದ್ದಿದೆ. ಸಾರ್ವಜನಿಕರು ಮರದ ಕೊಂಬೆಗಳನ್ನು ರಸ್ತೆಯಲ್ಲಿ ಇಟ್ಟು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು