ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ; ಬಿರುಗಾಳಿ ಸಹಿತ ಮಳೆ

Last Updated 26 ಮೇ 2020, 2:01 IST
ಅಕ್ಷರ ಗಾತ್ರ

ಗುಬ್ಬಿ: ಸೋಮವಾರ ಆರಂಭವಾದ ರೋಹಿಣಿ ಮಳೆ ಮೊದಲ ದಿನವೇ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಸುರಿಯಿತು. ಮಧ್ಯಾಹ್ನ 4 ಗಂಟೆ ಸಮಯದಲ್ಲಿ 20 ನಿಮಿಷ ಕಾಲ ಬಿರುಗಾಳಿ ಸಹಿತ ಜೋರಾಗಿ ಬಿತ್ತು.

ತಾಲ್ಲೂಕಿನ ಕಲ್ಲೂರು, ನಿಟ್ಟೂರು, ಕಡಬ, ಕಸಬಾ ಹೋಬಳಿಯ ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆಯಾದರೆ, ಜಿ.ಹೊಸಹಳ್ಳಿ, ಅಮ್ಮನಘಟ್ಟ ಭಾಗದಲ್ಲಿ ಮಳೆಯಾಗಿಲ್ಲ.

ಬಿರುಗಾಳಿ ಸಹಿತ ಸುರಿದ ಮಳೆಗೆ ಪಟ್ಟಣದ ಗಟ್ಟಿ ಲೇಔಟ್, ರಾಷ್ಟ್ರೀಯ ಹೆದ್ದಾರಿ 206, ರಾಯವಾರ ರಸ್ತೆ ಮತ್ತು ಸರ್ಕಾರಿ ಆರೋಗ್ಯ ಕೇಂದ್ರದ ಮುಂದಿದ್ದ ಮರಗಳು ಬಿರುಗಾಳಿಗೆ ಉರುಳಿ ಬಿದ್ದವು.

ಮಹಾಲಕ್ಷ್ಮಿ ಡಾಬಾ ಎದುರಿಗಿದ್ದ ಮರದ ಕೊಂಬೆಗಳು ಮುರಿದು ಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪಟ್ಟಣದ ಕೆಲವು ಯುವಕರು ಮರ ತೆರವುಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರದ ಕೊಂಬೆಗಳುವಿದ್ಯುತ್ ತಂತಿ ಮೇಲೆ ಮುರಿದು ಬಿದ್ದುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT