ಶಿರಾ: ರಾಷ್ಟ್ರೀಯ ಹೆದ್ದಾರಿ-48ರ ಬೈಪಾಸ್‌ನಲ್ಲಿ ಶುಕ್ರವಾರ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜಸ್ಥಾನದ ಕೈಗಾರಿಕೋದ್ಯಮಿ ಗಿರಿದಾರಿಲಾಲ್ ಶರ್ಮ (67) ಮೃತಪಟ್ಟಿದ್ದಾರೆ.
ರಾಜಸ್ಥಾನದ ಜೈಪುರ ನಗರದ ಕೈಗಾರಿಕೋದ್ಯಮಿ ಗಿರಿದಾರಿಲಾಲ್ ಶರ್ಮ ತುಮಕೂರಿನಲ್ಲಿ ವಾಸವಾಗಿದ್ದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ತಮ್ಮ ಕೈಗಾರಿಕೆಯನ್ನು ಪರಿಶೀಲನೆ ನಡೆಸಿ ಡಾಬಸ್‌ಪೇಟೆ ಬಳಿ ಇರುವ ಮತ್ತೊಂದು ಘಟಕವನ್ನು ನೋಡಲು ಹೋಗುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ.
ಶಿರಾ ಹೊರವಲಯದ ಉಗ್ರೇಶ್ ಲೇಔಟ್ ಕಡೆಯಿಂದ ಬೈಪಾಸ್‌ಗೆ ಬಂದ ಕಾರು ಎದುರಿಗೆ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಶಿರಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ