ಅಂಡಮಾನ್‌ನಲ್ಲಿ ತುಮಕೂರಿನ ಜನರ ರಾಜ್ಯೋತ್ಸವ

7

ಅಂಡಮಾನ್‌ನಲ್ಲಿ ತುಮಕೂರಿನ ಜನರ ರಾಜ್ಯೋತ್ಸವ

Published:
Updated:
Deccan Herald

ತುಮಕೂರು: ಇತ್ತೀಚೆಗೆ ತುಮಕೂರಿನಿಂದ ಅಂಡಮಾನ್‌ ಪ್ರವಾಸ ಕೈಗೊಂಡಿದ್ದ 43 ಜನರ ತಂಡ ಅಲ್ಲಿನ ಹೆರಿಟೇಜ್‌ ಹೋಟೆಲ್‌ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿತು. ತುಮಕೂರಿನ ಅಭ್ಯುದಯ ಸೇವಾ ಟ್ರಸ್ಟ್‌ನ ಸದಸ್ಯರೂ ಈ ಪ್ರವಾಸದಲ್ಲಿ ಇದ್ದರು.

ಪಿಯು ಡಿಡಿಪಿಐ ಡಾ.ಕುಮಾರಸ್ವಾಮಿ ಮಾತನಾಡಿ, ‘ಕುವೆಂಪು ವಿರಚಿತ ನಾಡಗೀತೆಯ ಆಶಯದಂತೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವೆ ಆಗಿದೆ. ರಾಷ್ಟ್ರದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳಿಸಿದ ನಾಡು ಕನ್ನಡ’ ಎಂದರು.

ಟ್ರಸ್ಟ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ಸಿ.ಲಲಿತಾ ಮಲ್ಲಪ್ಪ, ಕೆಎಂಎಫ್‌ನ ನಿವೃತ್ತ ಜಂಟಿ ನಿರ್ದೇಶಕ ನರಸೇಗೌಡ, ನಿವೃತ್ತ ಗ್ರಂಥಾಲಯ ಅಧಿಕಾರಿ ಪುರುಷೋತ್ತಮ್, ನಿವೃತ್ತ ಶುಶ್ರೂಷಕಿ ವಿಜಯಲಕ್ಷ್ಮಿ, ಭೈರವಿ ಮಹಿಳಾ ಸಂಘದ ಮಾಜಿ ನಿರ್ದೇಶಕಿ ಪದ್ಮಾ ರಾಮಲಿಂಗೇಗೌಡ ಹಾಗೂ ರಘು ಅವರನ್ನು ಸನ್ಮಾನಿಸಲಾಯಿತು 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !