ಕುದೂರು: ತಾಲ್ಲೂಕಿನ ಕುದೂರು ಹೋಬಳಿ ಕೆಂಪಾಪುರ ಗ್ರಾಮದಲ್ಲಿ ಬೀದಿನಾಯಿಗಳ ಹಿಂಡು ನಡೆಸಿದ ದಾಳಿಗೆ ಮೂರು ಕುರಿಗಳು ಬಲಿಯಾಗಿವೆ.

ಶುಕ್ರವಾರ ಮುಂಜಾನೆ ಗ್ರಾಮದ ರೈತ ತನ್ವೀರ್ ಪಾಷಾ ಅವರಿಗೆ ಸೇರಿದ ಕುರಿಗಳು ನಾಯಿಗಳ ದಾಳಿಗೆ ಸಾವನ್ನಪ್ಪಿವೆ. ಕೆಂಪಾಪುರ ಕೆರೆ ಬಳಿ ಕುರಿಗಳು ಮೇಯಲು ಹೋದಾಗ ಏಕಾಏಕಿ ದಾಳಿ ನಡೆಸಿವೆ.

ಈ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಲು ಕಾಗಿಮಡು ಗೇಟ್ ಬಳಿ ಕೋಳಿ ಅಂಗಡಿ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಪ್ರೋಜ್ ಎಂಬುವವರು ನಡೆಸುತ್ತಿರುವ ಕೋಳಿ ಅಂಗಡಿ ಕಸ ಮತ್ತು ತ್ಯಾಜ್ಯವನ್ನು ಪ್ರತಿದಿನ ರಾತ್ರಿ ವೇಳೆ ಕೆರೆ ಬಳಿ ಸುರಿಯಲಾಗುತ್ತಿದೆ.

ಈ ಬಗ್ಗೆ ಈಗಾಗಲೇ ಅದರಂಗಿ ಗ್ರಾಮ ಪಂಚಾಯಿತಿ ಮತ್ತು ಹುಲಿಕಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆ ಬಳಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಬೇಕು ಮತ್ತು ನಮಗೆ ನ್ಯಾಯ ಒದಗಿಸಬೇಕು ಎಂದು ರೈತ ತನ್ವೀರ್ ಪಾಷಾ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-14-136557431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.