ಸೊಂಡೆಕೊಪ್ಪಾದಲ್ಲಿ ರಾಮನವಮಿ

ಶನಿವಾರ, ಏಪ್ರಿಲ್ 20, 2019
29 °C

ಸೊಂಡೆಕೊಪ್ಪಾದಲ್ಲಿ ರಾಮನವಮಿ

Published:
Updated:

ಕುಣಿಗಲ್: ತಾಲ್ಲೂಕಿನ ಅಮೃತೂರು ಹೋಬಳಿಯ ಸೊಂಡೆಕೊಪ್ಪಾ ಗ್ರಾಮದ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ಶನಿವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಮಾನಂದ್ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಸುಪ್ರಭಾತ ಸೇವೆ, ಮೂಲ ದೇವರಿಗೆ ಗಂಧದ ಅಲಂಕಾರ, ಉತ್ಸವ ಮೂರ್ತಿಗೆ ತರಕಾರಿ ಅಲಂಕಾರ, ಸೀತಾ ರಾಮ ಲಕ್ಷ್ಮಣ ವಿಗ್ರಹಗಳಿಗೆ ಹೂವಿನ ಅಲಂಕಾರ ಮಾಡಲಾಗುವುದು.

ಸಂಜೆ 6.30ಕ್ಕೆ ಲೋಕ ಕಲ್ಯಾಣಾರ್ಥ ಸೀತಾ ರಾಮರ ತಿರು ಕಲ್ಯಾಣ ಮಹೋತ್ಸವ ಮತ್ತು ಜನಪದ ನೃತ್ಯ, ಉತ್ಸವ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !