ಹಿರಿಯ ಪತ್ರಕರ್ತ ಎಚ್.ಎಸ್. ರಾಮಣ್ಣ ನಿಧನ

ಗುರುವಾರ , ಮಾರ್ಚ್ 21, 2019
24 °C

ಹಿರಿಯ ಪತ್ರಕರ್ತ ಎಚ್.ಎಸ್. ರಾಮಣ್ಣ ನಿಧನ

Published:
Updated:
Prajavani

ತುಮಕೂರು: ನಗರದ ಎಸ್‌ಐಟಿ ಬಡಾವಣೆ ನಿವಾಸಿ, ಹಿರಿಯ ಪತ್ರಕರ್ತ ಎಚ್.ಎಸ್.ರಾಮಣ್ಣ (65) ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.

ರಾಮಣ್ಣ ಅವರು ತುಮಕೂರು ತಾಲ್ಲೂಕು ಹೆಬ್ಬೂರು ಗ್ರಾಮದವರು. ನಗರದಲ್ಲಿ ‘ತುಮಕೂರು ವಾರ್ತೆ‘ ದಿನಪತ್ರಿಕೆಯನ್ನು ಸಂಸ್ಥಾಪಕ ಸಂಪಾದಕರಾಗಿ 27 ವರ್ಷ ನಡೆಸಿದ್ದರು. ನಂತರ ಹತ್ತು ವರ್ಷಗಳಿಂದ ‘ನಗೆಮುಗುಳು’ ಹಾಸ್ಯ ಮಾಸಪತ್ರಿಕೆಯ ಸಂಪಾದಕರಾಗಿದ್ದರು.

ಎರಡು ವರ್ಷಗಳ ಹಿಂದೆ ನಗರದಲ್ಲಿ ಅ.ರಾ.ಮಿತ್ರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಹಾಸ್ಯ ಸಮ್ಮೇಳನ ಸಂಘಟಿಸಿದ್ದರು.  ಈಚೆಗೆ, ಎಚ್.ಎಸ್.ರಾಮಣ್ಣ ಟ್ರಸ್ಟ್ ಸ್ಥಾಪಿಸಿದ್ದರು. 

ಅಂತ್ಯಕ್ರಿಯೆ ಬುಧವಾರ ಗಾರ್ಡನ್‌ ರಸ್ತೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !