ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಮರುಕಳಿಸಿದ ಮಕ್ಕಳ ಕಲರವ

ಕೋವಿಡ್‌ ಮಾರ್ಗಸೂಚಿ ಪಾಲನೆ
Last Updated 2 ಜನವರಿ 2021, 3:55 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ವಿದ್ಯಾಗಮ ಮೂಲಕ ಶಾಲೆಗಳು ಶುಕ್ರವಾರ ಆರಂಭಗೊಂಡಿದ್ದು, ಮಕ್ಕಳು ಖುಷಿಯಿಂದಲೇ ಶಾಲೆಗಳಿಗೆ ಪ್ರವೇಶಿಸಿ ಪಾಠಗಳನ್ನು ಆಲಿಸಿದರು.

ಕೊರೊನಾ ಸಂಕಷ್ಟದಿಂದ ಕಳೆದ 8 ತಿಂಗಳುಗಳಿಂದ ಶಾಲೆಗಳಗೆ ಮಕ್ಕಳು ಬರುವುದನ್ನು ನಿಲ್ಲಿಸಲಾಗಿತ್ತು. ಮಕ್ಕಳು ಮನೆಯಲ್ಲಿಯೇ ಅನ್‌ಲೈನ್‌ ಮೂಲಕ ಪಾಠ ಕೇಳುವಂತಾಗಿತ್ತು. ಇದೀಗ ಸರ್ಕಾರದ ಕೋವಿಡ್‌ ಮಾರ್ಗಸೂಚಿಯಂತೆ ಪ್ರಾಥಮಿಕ ಶಾಲೆಯ 6 ಮತ್ತು 7 ಪ್ರೌಢಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮೂಲಕ ಮತ್ತು 10 ಮತ್ತು 12ನೇ ತರಗತಿಗಳಿಗೆ ಪೂರ್ಣ ಪ್ರಮಾಣದ ಪಾಠಗಳು ಆರಂಭವಾಗಿವೆ. ಹಲವು ತಿಂಗಳುಗಳಿಂದ ಮನೆಯಲ್ಲಿ ಕಳೆದಿದ್ದ ಮಕ್ಕಳು ಶಾಲೆಯಲ್ಲಿ ಖುಷಿಯಿಂದ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ವಿದ್ಯಾರ್ಥಿಗಳ ಲಭ್ಯತೆಗೆ ಅನುಗುಣವಾಗಿ ವಿದ್ಯಾಗಮ ಮೂಲಕ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರಯೋಗಿಕವಾಗಿ ಪ್ರಾಥಮಿಕ ಶಾಲೆಯ 6 ಮತ್ತು 7 ಪ್ರೌಢಶಾಲೆಯ, 8ಮತ್ತು 9 ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮೂಲಕ ಪಾಠಗಳು ಆರಂಭವಾಗಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಪಾಳಿ ಮೂಲಕ ಶಾಲೆಗೆ ಬರುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಶಾಲಾ ಕೊಠಡಿಗಳಲ್ಲಿ ಅಂತರ ಕಾಯ್ದುಕೊಂಡು ಕುಳಿತು ಪಾಠ ಕೇಳಲು ಸೂಚಿಸಲಾಗಿದೆ. ಆದರೆ ಮಕ್ಕಳು ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸುವುದು ಕಡ್ಡಾಯವಲ್ಲ’ ಎಂದು ಚಿಕ್ಕನಾಯಕನಹಳ್ಳಿ ಬಿಇಒ ಕಾತ್ಯಾಯಿನಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT