ಶನಿವಾರ, ಜುಲೈ 24, 2021
20 °C

ಆಹಾರ ಕಿಟ್ ವಿತರಣೆಗೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊಳೆಗೇರಿಗಳಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮುಖಂಡರು ಮನವಿ ಸಲ್ಲಿಸಿದರು.

ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿದ ಲಾಕ್‍ಡೌನ್‌ನಿಂದ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರಿಗೆ ಜೀವನ ನಿರ್ವಹಿಸುವುದು ದುಸ್ತರವಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದಿನಸಿ ಕಿಟ್ ಹಂಚಿಕೆ ಮಾಡುತ್ತಿದ್ದು, ಸ್ಲಂಗಳಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರಿಗೂ ನೀಡುವಂತೆ ಒತ್ತಾಯಿಸಿದರು.

ದಿಬ್ಬೂರು, ಮಾರಿಯಮ್ಮ ನಗರ, ಎನ್.ಆರ್.ಕಾಲೊನಿ, ಭಾರತಿನಗರ, ಶಾಂತಿನಗರ, ಅಂಬೇಡ್ಕರ್ ನಗರ, ನಿರ್ವಾಣಿ ಲೇಔಟ್, ಇಸ್ಮಾಯಿಲ್ ನಗರ, ಅಮಲಾಪುರ ಹಕ್ಕಿಪಿಕ್ಕಿ ಸಮುದಾಯ
ದವರು, ಸ್ಲಂ ನಿವಾಸಿಗಳು, ಮಂಗಳ
ಮುಖಿಯರು ಸೇರಿದಂತೆ 1,165 ಮಂದಿಗೆ ದಿನಸಿ ಕಿಟ್ ನೀಡುವಂತೆ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಆಗ್ರಹಿಸಿದರು.

ಅಸಂಘಟಿತ ವಲಯದ ಚಿಂದಿ ಆಯುವವರು, ಮನೆಕೆಲಸ, ಗೃಹ
ಕಾರ್ಮಿಕರು, ಚರ್ಮಕುಶಲಕರ್ಮಿಗಳು, ಕರಕುಶಲ ಅಲೆಮಾರಿಗಳು, ಹಂದಿ
ಜೋಗಿಗಳು, ಹಕ್ಕಿಪಿಕ್ಕಿ ಸಮುದಾಯ
ದವರು, ಸ್ಲಂ ನಿವಾಸಿಗಳು, ಕೂಲಿಕಾರ್ಮಿ
ಕರಿಗೆ ಅನುಕೂಲವಾಗುತ್ತದೆ ಎಂದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಕಾರ್ಮಿಕ ಇಲಾಖೆ ಜತೆ ಸಮಾಲೋಚಿಸಿ ಅಗತ್ಯವಿರುವ ಕುಟುಂಬಗಳಿಗೆ ಆಹಾರ ಕಿಟ್‍ ಒದಗಿಸಲು ಸೂಚಿಸಲಾಗುವುದು’ ಎಂದು ಭರವಸೆ ನೀಡಿದರು.

ಸಮಿತಿ ಗೌರವಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಅರುಣ್, ಸಹಕಾರ್ಯ
‌ದರ್ಶಿ ತಿರುಮಲಯ್ಯ, ಮೋಹನ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು