ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೆಎಎಸ್ ಹಿರಿಯ ಅಧಿಕಾರಿ ರಾಜೀನಾಮೆ ಅಂಗೀಕಾರ, ಅನಿಲ್ ಸ್ಪರ್ಧೆ

Last Updated 17 ನವೆಂಬರ್ 2021, 5:59 IST
ಅಕ್ಷರ ಗಾತ್ರ

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಲು ಬಯಸಿದ್ದ ಕೆಎಎಸ್ ಹಿರಿಯ ಅಧಿಕಾರಿ ಅನಿಲ್ ತಮ್ಮ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಜ್ಯ ಸರ್ಕಾರ ಮಂಗಳವಾರ ಅಂಗೀಕರಿಸಿದೆ.

ರಾಜೀನಾಮೆ ಅಂಗೀಕಾರ ಆಗಿರುವುದರಿಂದ ಅನಿಲ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಾಜೀನಾಮೆಗೆ ಒಪ್ಪಿಗೆ ಸಿಗುವುದನ್ನೇ ಕಾಯುತ್ತಿದ್ದ ದಳಪತಿಗಳು ಇನ್ನಷ್ಟೇ ಅಧಿಕೃತವಾಗಿ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೋಲು ಕಂಡಿದ್ದರು. ಅವರ ಸೋಲಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲವರು ಕಾರಣಕರ್ತರಾಗಿದ್ದು, ಅಂದಿನಿಂದಲೂ ಅವರ ಮೇಲೆ ದೊಡ್ಡಗೌಡರು ಒಂದು ಕಣ್ಣು ಇಟ್ಟಿದ್ದಾರೆ. ಅದ
ಕ್ಕಾಗಿ ‘ಪ್ರಬಲ’ ಸ್ಪರ್ಧೆ ಒಡ್ಡುವಂತಹ ಅಭ್ಯರ್ಥಿಗೆ ಹುಡುಕಾಟ ನಡೆಸಿದ್ದರು.

ಜಿಲ್ಲೆಯ ಮಟ್ಟಿಗೆ ಅಂತಹ ಅಭ್ಯರ್ಥಿ ಸಿಗದಿದ್ದಾಗ ಹೊಸ ಮುಖಗಳಿಗೆತಲಾಷೆ ನಡೆಸಿದ್ದರು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬದಲಿಗೆ ಪರ್ಯಾಯ ನಾಯಕನನ್ನು ಬೆಳೆಸುವ ಪ್ರಯತ್ನದಲ್ಲಿ ಬಿಜೆಪಿ ಮುಖಂಡ ನಾಗರಾಜ್ ಅವರನ್ನು ಪಕ್ಷಕ್ಕೆ ಕರೆತರಲಾಯಿತು. ಅವರ ಜತೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿಜೆಪಿಯ ರಾಮಾಂಜನಪ್ಪ ಜೆಡಿಎಸ್ ಸೇರ್ಪಡೆಯಾಗಿದ್ದರು. ಅವರ ಪುತ್ರ ಅನಿಲ್ ಅವರನ್ನು ಕಣಕ್ಕಿಳಿಸಿ ಮತ್ತೊಂದು ಹೋರಾಟಕ್ಕೆ ದಾಳ ಉರುಳಿಸಿದ್ದಾರೆ.

ನಾಯಕ ಸಮುದಾಯದ ಅನಿಲ್ ಅವರನ್ನು ಕಣಕ್ಕಿಳಿಸಿದರೆ ಸಮುದಾಯದ ಮತಗಳ ಜತೆಗೆ ಪಕ್ಷದ ಬೆಂಬಲಿಗರು, ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಒಕ್ಕಲಿಗ ಸಮುದಾಯದವರು ಕೈ ಹಿಡಿಯಬಹುದು. ರಾಜಕೀಯಕ್ಕೆ ಹೊಸ ಮುಖ ಪರಿಚಯಿಸಿ ಮತ ಕೇಳಿದರೆ ಅನುಕೂಲಕರವಾಗಬಹುದು. ಈಗಷ್ಟೇ ರಾಜಕೀಯಕ್ಕೆ ಬರುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ದ್ವೇಷ, ಜಂಟಾಟವೂ ಇರುವುದಿಲ್ಲ. ಕಾಂಗ್ರೆ
ಸ್, ಬಿಜೆಪಿ ಸಹ ಯುವ ಮುಖಗಳಿಗೆ ಅವಕಾಶ ನೀಡಿದರೆ ನಮ್ಮ ಅಭ್ಯರ್ಥಿಯೂ ಯುವಕರೇ ಎಂದು ಹೇಳಿ
ಕೊಂಡು ಚುನಾವಣೆ ಎದುರಿಸುವ ಲೆಕ್ಕಾಚಾರದಲ್ಲಿ ಪಕ್ಷದ ವರಿಷ್ಠರು ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT