ತುಮಕೂರು: ಸತತ ಎರಡನೇ ದಿನವಾದ ಬುಧವಾರವೂ ಮುಂದುವರಿದಿದ್ದ ಜಿಡಿ ಮಳೆ, ಮಧ್ಯಾಹ್ನದ ನಂತರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದೆ.

ಮಂಗಳವಾರ ಇಡೀ ದಿನ ಸುರಿದಿದ್ದ ಮಳೆ, ರಾತ್ರಿ ವೇಳೆಗೆ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮತ್ತೆ ಬುಧವಾರ ಮುಂಜಾನೆಯಿಂದಲೇ ಮಳೆ ಹನಿಗಳು ಬೀಳಲಾರಂಭಿಸಿದ್ದವು. ಬೆಳಿಗ್ಗೆ 8 ಗಂಟೆಯ ನಂತರ ಕೆಲ ಹೊತ್ತು ಬಿರುಸು ಪಡೆದುಕೊಂಡಿತ್ತು. ನಂತರ ಜಿಟಿಜಿಟಿ ಹನಿ ಮುಂದುವರಿದಿತ್ತು. ಮಧ್ಯಾಹ್ನ 1 ಗಂಟೆಯ ನಂತರ ಬಿಡುವು ಕೊಟ್ಟಿದೆ.

ನಿರಂತರವಾಗಿ ಎರಡು ದಿನಗಳ ಕಾಲ ಜಿಡಿ ಮಳೆಯಾಗಿದ್ದರೂ, ಪಾವಗಡ, ತುರುವೇಕೆರೆ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಬಿದ್ದಿದೆ. ತುಮಕೂರು, ಗುಬ್ಬಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ನಿರಂತರ ಸೋನೆ ಮಳೆಯಿಂದ ನೀರು ಭೂಮಿ ಸೇರಿದ್ದು, ಅಂತರ್ಜಲದ ಮರುಪೂರಣಕ್ಕೆ ಸಹಕಾರಿಯಾಗಿದೆ.

ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಜಿಡಿ ಮಳೆ ಸಾಕಷ್ಟು ಸಹಕಾರಿಯಾಗಿದೆ. ರಾಗಿ, ಅವರೆ, ಇತರೆ ಬೆಳೆಗಳಿಗೂ ಆಸರೆಯಾಗಿದೆ. ಮುಂದಿನ ದಿನಗಳಲ್ಲಿ ಒಂದೆರಡು ಬಾರಿ ಮಳೆ ಬಂದರೂ ರಾಗಿ ಬೆಳೆ ಕೈ ಸೇರಲಿದೆ ಎಂಬ ಆಶಾಭಾವನೆಯಲ್ಲಿ ರೈತರು ಇದ್ದಾರೆ.

ಸೆಪ್ಟೆಂಬರ್ ಕೊನೆ ಭಾಗದಲ್ಲಿ ಗುಬ್ಬಿ, ಕೊರಟಗೆರೆ, ಮಧುಗಿರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿತ್ತು. ತುಮಕೂರು, ಕುಣಿಗಲ್, ತುರುವೇಕೆರೆ, ತಿಪಟೂರು, ಶಿರಾ, ಪಾವಗಡ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಪ್ರಮುಖ ಆಹಾರ ಬೆಳೆ ರಾಗಿ ಬಿತ್ತನೆ ತಡವಾಗಿತ್ತು. ಆಗಸ್ಟ್ ತಿಂಗಳ ಅಂತ್ಯದವರೆಗೂ ರಾಗಿ ಬಿತ್ತನೆ ಮಾಡಲಾಗಿತ್ತು. ಕೆಲವು ಕಡೆಗಳಲ್ಲಿ ಸೆಪ್ಟೆಂಬರ್ ಮೊದಲ ವಾರವೂ ಬಿತ್ತನೆಯಾಗಿತ್ತು. ಈ ಬಾರಿ ನಿರೀಕ್ಷೆಯನ್ನೂ ಮೀರಿ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.

ಮಳೆ ಕೊರತೆಯಿಂದ ಪಾವಗಡ ಭಾಗದಲ್ಲಿ ಶೇಂಗಾ ಬಿತ್ತನೆ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಬಿತ್ತನೆ ಗುರಿಯಲ್ಲಿ ಅರ್ಧದಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅಡುಗೆ ಎಣ್ಣೆ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ.

ಒಟ್ಟಾರೆಯಾಗಿ ಅಕ್ಟೋಬರ್ ಮಧ್ಯ ಭಾಗದಲ್ಲಿ ಉತ್ತಮ ಮಳೆಯಾಗಿರುವುದು ಕೃಷಿಗೆ ಸಾಕಷ್ಟು ನೆರವಾಗಿದೆ. ಬೆಳೆ ಕೈ ಸೇರುವ ಆಶಾಭಾವನೆ ರೈತರಲ್ಲಿ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.