ಸೋಮವಾರ, ಆಗಸ್ಟ್ 15, 2022
28 °C

ಬೈಕ್ ರೈಡಿಂಗ್ ವೇಳೆ ಅಪಘಾತ: ಬೆಂಗಳೂರಿನ ಟೆಕ್ಕಿ ತುಮಕೂರಿನಲ್ಲಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬೈಕ್ ರೈಡಿಂಗ್ ಮಾಡುವಾಗ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸೂರಜ್‌(27) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಣಿಗಲ್‌ ತಾಲ್ಲೂಕಿನ ಗವಿಮಠದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರಿನ ಸೂರಜ್‌ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಾರಾಂತ್ಯದ ರಜೆಯ ಪ್ರಯುಕ್ತ ಸ್ನೇಹಿತ ಅಜಯ್‌ ಜತೆ ಬೈಕ್ ರೈಡಿಂಗ್‌ ಮಾಡುವಾಗ ಅಪಘಾತ ಸಂಭವಿಸಿದೆ.

ಇಬ್ಬರು ಡುಕಾಟಿ ಬೈಕ್‌ಗಳಲ್ಲಿ ಬೆಂಗಳೂರಿನಿಂದ ಹೊರಟಿದ್ದು, ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ವಾಹನವೊಂದಕ್ಕೆ ತಗುಲಿ, ನಿಯಂತ್ರಣ ತಪ್ಪಿದ ಸೂರಜ್ ಗವಿಮಠದ ಬಳಿಯ ರಾಷ್ಟ್ರೀಯ ಹೆದ್ದಾರಿ 72ರ ಸೇತುವೆಯ ಮೇಲಿಂದ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನ ನುಜ್ಜುಗುಜ್ಜಾಗಿದೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು