ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 13 ಕೋಟಿಯಲ್ಲಿ ರಸ್ತೆ ಅಭಿವೃದ್ಧಿ

Last Updated 26 ಸೆಪ್ಟೆಂಬರ್ 2022, 16:34 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಬಸವಣ್ಣನ ಗುಡಿ ವೃತ್ತದಿಂದ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಸಿ. ಗೌರಿಶಂಕರ್‌ ಸೋಮವಾರ ಚಾಲನೆ
ನೀಡಿದರು.

ಬಸವಣ್ಣನ ಗುಡಿಯಿಂದ ಕೌತಮಾರನಹಳ್ಳಿ, ದಿಣ್ಣೆಪಾಳ್ಯ, ಕೊಟ್ಟಿಗೆ ಗೊಲ್ಲಹಳ್ಳಿ, ದೊಡ್ಡೆ ಗೌಡನಪಾಳ್ಯ, ಆದಿಶಕ್ತಿ ಕೆಂಪಮ್ಮನ ದೇವಾಲಯ, ಗುಣಿಗೊಲ್ಲಹಳ್ಳಿ, ಐನಾಪೂರ, ನೇರಳಾಪುರ ಗ್ರಾಮದ ಮೂಲಕ ಹಾದು ಹೋಗಿ ಸಾಸಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ₹ 13 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ರಸ್ತೆ ಅಭಿವೃದ್ಧಿಯಿಂದಾಗಿ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಗೌರಿಶಂಕರ್‌ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸೂಕ್ತ ಪರಿಹಾರ ಕಲ್ಪಿಸಿದರು. ಜೆಡಿಎಸ್‌ ಮುಖಂಡರಾದ ರಾಮಚಂದ್ರಪ್ಪ, ಪಾಲನೇತ್ರಯ್ಯ, ಗೋವಿಂದರಾಜು, ರೂಪ, ಮೋಹನ್‌ಕುಮಾರ್, ಪವಿತ್ರಾ ಶಿವಪ್ರಸಾದ್, ಲೋಕೇಶ್, ಹೇಮಂತ್, ವೆಂಕಟೇಶ್, ನಾಗರಾಜು, ಬಸವರಾಜು, ಶಿವಣ್ಣ, ನಾಗಣ್ಣ, ರವಿಕಿರಣ್, ಕುಶಾಲ್, ಗೋಪಾಲ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT