ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಗೋಡೆಕೆರೆ ವ್ಯಾಪ್ತಿಯ ಬೈರಾಗನಹಳ್ಳಿ ಸಮೀಪ ಭಾನುವಾರ ರೋಡ್ ರೋಲರ್ ಹರಿದು, ಬೈಕ್ ಸವಾರ ದಂಡಿನಶಿವರ ನಾಗರಾಜ್ (45) ಮೃತಪಟ್ಟಿದ್ದಾರೆ.

ನಾಗರಾಜ್ ತಮ್ಮ ಪತ್ನಿಯೊಂದಿಗೆ ಪಟ್ಟಣದ ಕುರುಬರಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಬೈರಾಗನಹಳ್ಳಿ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಹಿಂದೆಯಿಂದ ಬರುತ್ತಿದ್ದ ರೋಡ್ ರೋಲರ್ ನಾಗರಾಜ್ ಮೇಲೆ ಹರಿದಿದೆ. ಅವರ ಪತ್ನಿ ರಸ್ತೆಯ ಪಕ್ಕ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ರಸ್ತೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಸುರಕ್ಷತಾ ನಿಯಮ ಪಾಲಿಸಿಲ್ಲ. ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.