ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

ತುಮಕೂರು | ಬೆಳಗದ ದೀಪ; ರಸ್ತೆ, ಚರಂಡಿ ಹಾಳು

ನಗರ ಹೊರವಲಯದಲ್ಲಿ ಹೆಚ್ಚಿದ ಕಳವು ಪ್ರಕರಣ
Published : 7 ಜೂನ್ 2025, 7:14 IST
Last Updated : 7 ಜೂನ್ 2025, 7:14 IST
ಫಾಲೋ ಮಾಡಿ
Comments
ಶಿವಶಕ್ತಿ ಬಡಾವಣೆಯಲ್ಲಿ ಚರಂಡಿಗೆ ಕಲ್ಲು ಚಪ್ಪಡಿ ಹಾಕಿರುವ ಸ್ಥಿತಿ
ಶಿವಶಕ್ತಿ ಬಡಾವಣೆಯಲ್ಲಿ ಚರಂಡಿಗೆ ಕಲ್ಲು ಚಪ್ಪಡಿ ಹಾಕಿರುವ ಸ್ಥಿತಿ
ಚರಂಡಿ ನಿರ್ಮಿಸಿ ಚರಂಡಿ ಸಮರ್ಪಕವಾಗಿಲ್ಲ. ಮಳೆ ಬಂದರೆ ನೀರು ಹರಿಯಲು ವ್ಯವಸ್ಥೆ ಮಾಡಿಲ್ಲ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಹರಡಿಕೊಂಡಿದ್ದು ಅದನ್ನು ತೆರವುಗೊಳಿಸಿಲ್ಲ. ಕಸ ಸಂಗ್ರಹ ವಾಹನಗಳು ಪ್ರತಿ ದಿನ ಇತ್ತ ಬರುವುದಿಲ್ಲ. ಖಾಲಿ ಜಾಗದಲ್ಲಿ ಕಸ ಹಾಕುವುದು ಜಾಸ್ತಿಯಾಗಿದೆ.
– ಪುನೀತ್, ಶಿವಶಕ್ತಿ ಬಡಾವಣೆ
ಅಭಿವೃದ್ಧಿ ಹೇಗೆ? ಬಡಾವಣೆಯ ವಿವಿಧ ರಸ್ತೆಗಳಿಗೆ ಕನಿಷ್ಠ ಡಾಂಬರು ಹಾಕುವ ಕೆಲಸವಾಗಿಲ್ಲ. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಎಂಜಿನಿಯರ್ ಹತ್ತಿರ ಕಾಮಗಾರಿ ಕುರಿತು ಕೇಳಿದರೆ ಹಣವಿಲ್ಲ ಎನ್ನುತ್ತಿದ್ದಾರೆ. ಹೀಗಾದರೆ ಬಡಾವಣೆಗಳ ಅಭಿವೃದ್ಧಿ ಆಗುವುದು ಹೇಗೆ?
– ವಿರೂಪಾಕ್ಷಯ್ಯ, ಶಿವಶಕ್ತಿ ಬಡಾವಣೆ ಟಿವಿಎಸ್ ಬಡಾವಣೆ ಸಂಜಯನಗರ ನಾಗರಿಕರ ಹಿತರಕ್ಷಣಾ ಸಮಿತಿ
ಯುಜಿಡಿ ಸರಿಯಾಗಿಲ್ಲ ಹೆಸರಿಗೆ ಮಾತ್ರ ಟೂಡ ಲೇಔಟ್. ಒಂದು ರಸ್ತೆಯಲ್ಲೂ ಯುಜಿಡಿ ಸರಿಯಾಗಿಲ್ಲ. ರಸ್ತೆಗಳು ಅಧ್ವಾನ ದುರಸ್ತಿಪಡಿಸಿಲ್ಲ. ಓವರ್ ಹೆಡ್ ಟ್ಯಾಂಕ್ ಕಟ್ಟಿ ಹಾಗೆಯೆ ಬಿಟ್ಟಿದ್ದಾರೆ. ಅದನ್ನು ಸರಿಯಾಗಿ ಬಳಸುತ್ತಿಲ್ಲ. ಪ್ರತಿ ಮನೆಗೆ ನೀರಿನ ಸಂಪರ್ಕ ಇಲ್ಲ. ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
– ಮಹೇಶ್, ಟೂಡ ಲೇಔಟ್
ಸಮಗ್ರ ಅಭಿವೃದ್ಧಿ ಶುದ್ಧ ಕುಡಿಯುವ ನೀರಿನ ಘಟಕ ರಸ್ತೆ ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ. ಶಾಸಕರ ಅನುದಾನ ಮಹಾನಗರ ಪಾಲಿಕೆ ನಗರಾಭಿವೃದ್ಧಿ ಪ್ರಾಧಿಕಾರದ ಹಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
– ನವೀನ ಅರುಣ್‌, ಮಾಜಿ ಸದಸ್ಯೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT