ಮಂಗಳವಾರ, ಸೆಪ್ಟೆಂಬರ್ 29, 2020
25 °C

ಬಂಡೆ ಸ್ಫೋಟ: ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ತಾಲ್ಲೂಕಿನ ಥರಟಿ ಗ್ರಾಮದ ಬಳಿ ಮಂಗಳವಾರ ಕಲ್ಲುಬಂಡೆ ಸ್ಫೋಟಿಸುವ ವೇಳೆ ಕಲ್ಲು ಸಿಡಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್ ರಾಜ್ಯದ ಸಾಯಬ್‌ ಖಾನ್ ಜಿಲ್ಲೆಯ ಕನ್ನಯ್ಯ (36) ಮೃತಪಟ್ಟವರು. ಬಾಗಲಕೋಟೆಯ ಗುರುನಾಥ, ತಮಿಳುನಾಡಿನ ರಾಜು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಥರಟಿ ಗ್ರಾಮದ ಸಮೀಪ ಜಗನ್ನಾಥಪುರ ಗ್ರಾಮದ ಸರ್ವೆ ನಂಬರ್‌ನಲ್ಲಿರುವ ದೇವರಬೆಟ್ಟದಲ್ಲಿ ತುಮಕೂರಿನ ಗ್ಯಾಸ್ ಬಾಬು ಎಂಬುವರ ಕಲ್ಲು ಗಣಿಗಾರಿಗೆಯಲ್ಲಿ ಸಿಡಿಮದ್ದು ಇಟ್ಟು ಕಲ್ಲು ಬಂಡೆ ಸಿಡಿಸುವಾಗ ಅವಘಡ ಸಂಭವಿಸಿದೆ. ಅತಿ ಎತ್ತರದ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವ ಕಾರಣ ಕಲ್ಲು ಪುಡಿಮಾಡಲು ಸ್ಫೋಟಕ ಬಳಸಲಾಗುತ್ತಿದೆ. ಇದರಿಂದ ಬೆಟ್ಟದ ಮೇಲಿಂದ ಕಲ್ಲುಗಳು ಸ್ಫೋಟಗೊಂಡು ಕೆಳಗೆ ಬೀಳುತ್ತವೆ.

‘ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಅತ್ಯಂತ ಅಪಾಯಕಾರಿಯಾಗಿದ್ದು, ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಇಂತಹ ಜಾಗದಲ್ಲಿ ಕಲ್ಲುಗಣಿಗಾರಿಕೆಗೆ ಹೇಗೆ ಪರವಾನಗಿ ನೀಡಿದರು ಎಂಬುದು ಪ್ರಶ್ನೆಯಾಗಿದೆ. ಕಲ್ಲು ಸ್ಫೋಟಕ ಬಳಸಲು ಪರವಾನಗಿ ಪಡೆದಿದ್ದಾರೆಯೇ? ಇಲ್ಲವೇ ಎಂಬುದನ್ನು ಪರಿಶೀಲಿಸಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಿಪಿಐ ಎಫ್.ಕೆ.ನದಾಫ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು