ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಜನರು ಸತ್ಕಾರ್ಯದಲ್ಲಿ ಪಾಲ್ಗೊಳ್ಳಿ’

Last Updated 1 ಆಗಸ್ಟ್ 2020, 16:14 IST
ಅಕ್ಷರ ಗಾತ್ರ

ತುಮಕೂರು: ಯುವ ಜನರು ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಈ ದಿಕ್ಕಿನಲ್ಲಿ ಆಲೋಚನೆಮಾಡಿ ಮುನ್ನಡೆಯಬೇಕು ಎಂದು ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ನುಡಿದರು.

ತುಮಕೂರು ರೋಟರಿ ಸಹಯೋಗದಲ್ಲಿ ಕಾರದ ಮಠದ ವಿದ್ಯಾರ್ಥಿಗಳಿಗೆ ಆಯುಷ್ ಇಲಾಖೆಯಿಂದ ನೀಡುತ್ತಿರುವ ಆಯುಷ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಮಕೂರು ರೋಟರಿ ಸಂಸ್ಥೆ ಹಲವು ವರ್ಷಗಳಿಂದ ಮಾಡುತ್ತಿರುವ ಸೇವೆ ಗಮನಿಸುತ್ತಿದ್ದೇವೆ. ಕೊರೊನಾದ ಸಮಯದಲ್ಲಿ ಹಲವರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ. ಮಠಕ್ಕೆ ಆಹಾರಧಾನ್ಯಗಳನ್ನು ವಿತರಿಸಿದ್ದಾರೆ ಎಂದು ಪ್ರಶಂಸಿಸಿದರು.

ಅಧ್ಯಕ್ಷತೆವಹಿಸಿದ್ದ ತುಮಕೂರು ರೋಟರಿ ಅಧ್ಯಕ್ಷ ಜಿ.ಎನ್.ಮಹೇಶ್, ‘ಕೊರೊನಾದ ಈ ಸಮಯದಲ್ಲಿ ಮನುಷ್ಯನ ಆರೋಗ್ಯಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಮತ್ತು ಆಯುರ್ವೇದಿಕ್ ಕಿಟ್‌ಗಳು ಸರ್ಕಾರದಿಂದ ಎಲ್ಲರಿಗೂ ತಲುಪಬೇಕು’ ಎಂದರು.

ಡಾ.ವೀರೇಶ್ ಕಲ್ಮಠ್, ‘ಇಂದಿನ ದಿನಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಔಷಧಗಳು ಹೆಚ್ಚು ಪರಿಣಾಮಕಾರಿ. ವಿಟಮಿನ್, ಪ್ರೋಟಿನ್ ನಂತಹ ಹಣ್ಣು, ತರಕಾರಿಗಳನ್ನು ಉಪಯೋಗಿಸುವುದು ಹೆಚ್ಚು ಸೂಕ್ತ. ರೋಗ ನಿರೋಧಕ ಮದ್ದುಗಳನ್ನು ಮನೆಗಳಲ್ಲಿಯೇ ಸಿದ್ಧಪಡಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಮುಖಂಡರಾದ ಬಸವರಾಜ್ ಹಿರೇಮಠ್, ಷಣ್ಮುಗಪ್ಪ, ಅಭಿನಂದನ್, ನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT