ನೆರೆ ಸಂತ್ರಸ್ತರ ನೆರವಿಗೆ ಧಾವಿಸಿ

7
ಸಂಘ ಸಂಸ್ಥೆಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿ

Published:
Updated:
Deccan Herald

ತುಮಕೂರು: ನೆರೆಯ ಕೇರಳ ಹಾಗೂ ರಾಜ್ಯದ ಕೊಡಗಿನಲ್ಲಿ ಉಂಟಾಗಿರುವ ಭೀಕರ ಮಳೆ, ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.

ಶನಿವಾರ ನಗರದ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ತುಮಕೂರಿನ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಆಸ್ತಿ ನಾಶವಾಗಿ ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ. ರೆಡ್‌ಕ್ರಾಸ್ ಸಂಸ್ಥೆಯ ಮೂಲಕ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಂಗ್ರಹ ಮಾಡಲಾಗುತ್ತಿದೆ. ಅದೇ ರೀತಿ ತುಮಕೂರಿನಲ್ಲಿರುವ ಕೇರಳ ಸಮಾಜದವತಿಯಿಂದ ಸ್ವೀಕಾರ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು.

ಆ್ಯಂಟಿ ಫಂಗಲ್ ಕ್ರೀಮ್, ಪ್ಲಾಸ್ಟಿಕ್ ಮ್ಯಾಟ್‌, ಬಳಸದಿರುವ ಬಟ್ಟೆಗಳು, ಹೊದಿಕೆಗಳು, ಅಕ್ಕಿ, ಕಾಳು ದವಸ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ನಗರದ ರೆಡ್‌ ಕ್ರಾಸ್‌ ಭವನದ ಮೊದಲನೇ ಮಹಡಿಯಲ್ಲಿರುವ ಎಫ್‌–223 ಮಳಿಗೆಯಲ್ಲಿ ತೆರೆದ ಸ್ವೀಕಾರ ಕೇಂದ್ರಕ್ಕೆ ಸಲ್ಲಿಸಬೇಕು. ಕೇರಳ ಸಮಾಜದವತಿಯಿಂದ ಕಾಲ್ಟೆಕ್ಸ್ ಸಮೀಪ ಸ್ವೀಕಾರ ಕೇಂದ್ರ ತೆರೆದು ಸಾರ್ವಜನಿಕರಿಂದ ನೆರವು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯ ಜನರು ವಿಶಾಲ ಹೃದಯದಿಂದ ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು.

ರೆಡ್‌ ಕ್ರಾಸ್ ಸಂಸ್ಥೆಯ ಚೇರ್‌ಮನ್ ಎಸ್.ನಾಗಣ್ಣ, ಸಮಿತಿ ಸದಸ್ಯರಾದ ಸಗರನಹಳ್ಳಿ ಪ್ರಭು, ಸುರೇಂದ್ರ ಷಾ, ಮುಸ್ತಾಕ್ ಅಹಮ್ಮದ್, ಸುಭಾಷಿಣಿ, ಡಾ.ಲಕ್ಷ್ಮಣದಾಸ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !