ಮಂಗಳವಾರ, ನವೆಂಬರ್ 19, 2019
27 °C

ಸಚಿವರ ಶಾಲಾ ವಾಸ್ತವ್ಯ: ಮೋದಿ ಯಾರಂತ ಗೊತ್ತಿಲ್ವಲ್ಲೋ ನಿನಗೆ- ಸುರೇಶ್‌ ಕುಮಾರ್‌

Published:
Updated:

ಪಾವಗಡ: ನಮ್ಮ ದೇಶದ ಪ್ರಧಾನಿ ಯಾರು ಹೇಳು ಎಂದು ವಿದ್ಯಾರ್ಥಿಯೊಬ್ಬನಿಗೆ ಸಚಿವರು ಪ್ರಶ್ನೆ ಕೇಳಿದರು, ಆ ವಿದ್ಯಾರ್ಥಿ ಉತ್ತರ ಹೇಳದಿದ್ದಾಗ ಮೋದಿ ಯಾರಂತ ಗೊತ್ತಿಲ್ವಲ್ಲೋ ನಿನಗೆ ಎಂದರು. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಲ್ಲಿನ ಎನ್.ಅಚ್ಚಮನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ವಾಯು ವಿಹಾರ ಮುಗಿಸಿದ ಬಳಿಕ ಶಾಲಾ ಅಂಗಳಕ್ಕೆ ಬಂದ ಸಚಿವರು ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸಂವಾದ ನಡೆಸಿದರು. 

ಇದನ್ನೂ ಓದಿ: ಸೆ.19ರಂದು ಶಿಕ್ಷಣ ಸಚಿವರಿಂದ ಎನ್.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಶಾಲಾ ವಾಸ್ತವ್ಯ

ವಿದ್ಯಾರ್ಥಿಯೊಬ್ಬನ ಜೊತೆ ಮಾತನಾಡುತ್ತ, ನಮ್ಮ ದೇಶದ ಪ್ರಧಾನಿ ಯಾರು? ಎಂದು ಪ್ರಶ್ನೆ ಕೇಳಿದರು. ಆ ಪ್ರಶ್ನೆಯನ್ನು ಮೂರ್ನಾಲ್ಕು ಸಲ ಅರ್ಥೈಸಿ ಕೇಳಿದರೂ ವಿದ್ಯಾರ್ಥಿಯಿಂದ ಉತ್ತರ ಬರಲಿಲ್ಲ! ಕಡೆಗೆ ಪ್ರೈಮ್‌ ಮಿನಿಸ್ಟರ್ ಎಂಬ ಪದ ಬಳಸಿ ಕೇಳಿದರೂ ವಿದ್ಯಾರ್ಥಿಯಿಂದ ಉತ್ತರ ಬರಲೇ ಇಲ್ಲ!  ಆಗ ಸಚಿವರು, ಮೋದಿ ಯಾರಂತ ಗೊತ್ತಿಲ್ವಲ್ಲೋ ನಿನಗೆ ಎಂದು ಪ್ರತಿಕ್ರಿಯಿಸಿದರು.

ವಿದ್ಯಾರ್ಥಿಯಿಂದ ಆರರ ಮಗ್ಗಿ ಹೇಳಿಸಿದರು. ಮಗ್ಗಿ ತಪ್ಪಾದ ಕಡೆ ತಿದ್ದಿ ಹೇಳಿದರು. 

ಇದನ್ನೂ ಓದಿ: ಸಂವೇದನಾ ಸಂವಾದ | ಸಾರ್... ಚೀಲದ ಭಾರ ಕಡಿಮೆ ಮಾಡಿ, ಆಟದ ಅವಧಿ ಕಿತ್ತುಕೊಳ್ಳಬೇಡಿ

ಸಂಪಿಗೆ ಗಿಡ ನೆಟ್ಟ ಸಚಿವರು:  ವಾಸ್ತವ್ಯ ಹೂಡಿದ ಶಾಲೆಯಿಂದ ಹೊರಡುವ ಮುನ್ನ ಸಚಿವರು ಅಂಗಳದಲ್ಲಿ ಸಂಪಿಗೆ ಗಿಡ ನೆಟ್ಟರು. ಡಿ.ಡಿ.ಪಿ.ಐ. ಹುಣಸೆ ಗಿಡ ಹಾಕಿದರು.

ಪ್ರತಿಕ್ರಿಯಿಸಿ (+)