ಜಿಲ್ಲೆಯಲ್ಲಿನ ಸಖಿ ಮತಗಟ್ಟೆಗಳು

ಶುಕ್ರವಾರ, ಏಪ್ರಿಲ್ 26, 2019
35 °C

ಜಿಲ್ಲೆಯಲ್ಲಿನ ಸಖಿ ಮತಗಟ್ಟೆಗಳು

Published:
Updated:

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಮತ್ತು ಅಂಗವಿಕಲರು ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಸಖಿ ಮತಗಟ್ಟೆಗಳು: ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಮತಗಟ್ಟೆ 221( ಚಿಕ್ಕನಾಯಕನಹಳ್ಳಿ–9), ಮತಗಟ್ಟೆ 238 (ಜೋಗಿಹಳ್ಳಿ), ತಿಪಟೂರು ಕ್ಷೇತ್ರದಲ್ಲಿ ಮತಗಟ್ಟೆ 101( ಟೌನ್ ಮುನ್ಸಿಪಲ್), ಮತಗಟ್ಟೆ 15 ( ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ), ತುರುವೇಕೆರೆ ಕ್ಷೇತ್ರದಲ್ಲಿ ಮತಗಟ್ಟೆ 84(ಜಿಎಂಎಚ್‌ಬಿಪಿ ಕಟ್ಟಡ– ತುರುವೇಕೆರೆ), ಮತಗಟ್ಟೆ– 29( ದಂಡಿನ ಶಿವರ ಸರ್ಕಾರಿ ಪ್ರೌಢ ಶಾಲೆ), ಕುಣಿಗಲ್ ಕ್ಷೇತ್ರದಲ್ಲಿ ಮತಗಟ್ಟೆ 69 (ಜಿಕೆಬಿಎಂಎಸ್, ಕುಣಿಗಲ್ ಟೌನ್), ಮತಗಟ್ಟೆ 73 (ಜಿಜಿಎಂ ಕಾಲೇಜು, ಕುಣಿಗಲ್ ಟೌನ್) ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ.

ಅದೇ ರೀತಿ ತುಮಕೂರು ನಗರ ಕ್ಷೇತ್ರದಲ್ಲಿ ಮತಗಟ್ಟೆ 154 ( ಸರ್ವೋದಯ ಸ್ವತಂತ್ರ ಪಿಯು ಕಾಲೇಜು), ಮತಗಟ್ಟೆ 219 (ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್), ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತಗಟ್ಟೆ 13 (ಜಿಎಂಎಚ್‌ಪಿಎಸ್ ಬೆಳ್ಳಾವಿ–1), ಮತಗಟ್ಟೆ 202 (ಜಿಎಚ್‌ಪಿಎಸ್ ಬೇಗೂರು), ಕೊರಟಗೆರೆ ಕ್ಷೇತ್ರದಲ್ಲಿ ಮತಗಟ್ಟೆ 126 (ಜಿಎಲ್‌ಪಿಎಸ್, ಹುಲಿಕುಂಟೆ), ಮತಗಟ್ಟೆ 96 ( ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊರಟಗೆರೆ), ಗುಬ್ಬಿ ಕ್ಷೇತ್ರದಲ್ಲಿ ಮತಗಟ್ಟೆ 142 (ಜಿಬಿಎಚ್‌ಪಿಎಸ್, ಗುಬ್ಬಿ ಪಟ್ಟಣ), ಮತಗಟ್ಟೆ 184 (ಜಿಎಚ್‌ಪಿಎಸ್, ಜಿ.ಹೊಸಹಳ್ಳಿ) ಸಖಿ ಮತಗಟ್ಟೆ ತೆರೆಯಲಾಗಿದೆ.

ಶಿರಾ ಕ್ಷೇತ್ರದಲ್ಲಿ ಮತಗಟ್ಟೆ 141 ( ಜಿಎಲ್‌ಪಿಎಸ್, ರಂಗನಾಥನಗರ), ಮತಗಟ್ಟೆ 165 (ಜಿಯುಎಲ್‌ಪಿಎಸ್, ಅಸ್ಸಾರ ಮೊಹಲ್ಲಾ), ಪಾವಗಡ ಕ್ಷೇತ್ರದಲ್ಲಿ ಮತಗಟ್ಟೆ 171( ಕಸ್ತೂರಬಾ ವಸತಿ ಶಾಲೆ, ಪಾವಗಡ), ಮತಗಟ್ಟೆ 177 ( ಜಿಯುಎಚ್‌ಪಿಎಸ್, ಪಾವಗಡ), ಮಧುಗಿರಿ ಕ್ಷೇತ್ರದಲ್ಲಿ ಮತಗಟ್ಟೆ 165 ( ಜಿಎಂಎಚ್‌ಪಿಎಸ್ ವೆಸ್ಟ್ ವಿಂಗ್, ಮಧುಗಿರಿ), ಮತಗಟ್ಟೆ 166 ( ಜಿಎಂಎಚ್‌ಜಿಪಿಎಸ್, ಈಸ್ಟ್ ವಿಂಗ್, ಮಧುಗಿರಿ).

ಅಂಗವಿಕಲರಿಗೆ ಗಾಲಿ ಖುರ್ಚಿ, ವಾಹನ ವ್ಯವಸ್ಥೆ

ಪ್ರತಿ ಮತಗಟ್ಟೆಯಲ್ಲೂ ಅಂಗವಿಕಲರಿಗೆ ಮತದಾನ ಮಾಡಲು ಸಹಾಯವಾಗಲು ಗಾಲಿ ಕುರ್ಚಿ ಮತ್ತು ವಾಹನ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !