ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮೆಡಲ್‌ಗೆ ಭಾಜನರಾದ ಸಾದಿಕ್ ಕುಟುಂಬಕ್ಕೆ ಸನ್ಮಾನ

Last Updated 26 ಜನವರಿ 2019, 14:06 IST
ಅಕ್ಷರ ಗಾತ್ರ

ತುಮಕೂರು: ಭಯೋತ್ಪಾದಕರ ಸದೆಬಡಿದು ಶೌರ್ಯ ಸಾಧನೆ ಮಾಡಿ ‘ಸೇನಾ ಮೆಡಲ್’ ಪ್ರಶಸ್ತಿಗೆ ಭಾಜನರಾದ ತುಮಕೂರು ನಗರದ ಯೋಧರಾದ ಎಂ.ಸಾದಿಕ್ ಅವರ ಕುಟುಂಬವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸನ್ಮಾನಿಸಿದರು.

ಎಂ. ಸಾದಿಕ್ ಅವರ ತಾಯಿ ಸಿರಾಜುನ್ನೀಸಾ, ಪತ್ನಿ ರೆಹಮಾನ್ ಉನ್ನೀಸಾ ಹಾಗೂ ಪುತ್ರ ಮೊಹಮ್ಮದ್ ಐಮೂನ್ ಅವರನ್ನು ಡಾ.ಪರಮೇಶ್ವರ ಗೌರವಿಸಿದರು.

ಎಂ.ಸಾದಿಕ್ ಅವರ ಶೌರ್ಯ ಸಾಧನೆಯನ್ನು ಕೊಂಡಾಡಿದರು. ಸೇನಾ ಮೆಡಲ್ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಸಾದಿಕ್ ಅವರಿಗೆ ಹಾಗೂ ಅವರ ಸಾಧನೆಗೆ ಆತ್ಮಸ್ಥೈರ್ಯ ತುಂಬಿದ ಕುಟುಂಬದವರಿಗೆ ಅಭಿನಂದಿಸಿದರು.

ಹಬ್ಬದ ಸಂಭ್ರಮ: ಎಂ.ಸಾದಿಕ್ ಅವರು ವಾಸಿಸುವ ನಗರದ ಪಿ.ಎಚ್. ಕಾಲೊನಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಹಬ್ಬದ ಸಂಭ್ರಮ. ಗಣರಾಜ್ಯೋತ್ಸವ ದಿನವಾದ ಶನಿವಾರ ಬೆಳಿಗ್ಗೆ ಬಡಾವಣೆಯಲ್ಲಿ ಅವರ ಆಪ್ತರು, ಸ್ನೇಹಿತರು, ಬಂಧುಗಳು ಸಾದಿಕ್ ಅವರ ಚಿತ್ರ, ಅವರ ಶೌರ್ಯ ಸಾಧನೆ ಬಣ್ಣನೆಯ ಸಂದೇಶಗಳನ್ನೊಳಗೊಂಡ ಫ್ಲೆಕ್ಸ್‌ಗಳನ್ನು ಹಾಕಿ ಅಭಿಮಾನ ಮೆರೆದರು.

ನಗರದ ಬಿ.ಎಚ್. ರಸ್ತೆ ಸೇರಿದಂತೆ ಇತರ ಕಡೆಗೂ ಇಂತಹ ಫ್ಲೆಕ್ಸ್ ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT