ಶನಿವಾರ, ಮೇ 15, 2021
29 °C

ರಾಜ್ ಸಿನಿಮಾಗಳಲ್ಲಿ ಸಾಮಾಜಿಕ ಕಳಕಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವರನಟ ರಾಜ್‌ಕುಮಾರ್ ಅವರ ಚಲನಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಂದೇಶಗಳು ಇರುತ್ತಿದ್ದ ಕಾರಣದಿಂದಲೇ ಅಂದಿನ ಯುವ ಸಮೂಹ, ಅವರನ್ನು ಮಾದರಿಯಾಗಿಸಿಕೊಂಡಿತ್ತು ಎಂದು ಶಾಸಕ ಬಿ.ಜಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

ನಗರದ ಹೊರಪೇಟೆಯಲ್ಲಿ ಜಿಲ್ಲಾ ‘ಶತಶೃಂಗರಾಜ ಡಾ.ರಾಜ್‍ಕುಮಾರ್ ಕನ್ನಡ ಅಭಿಮಾನಿಗಳ ಸಂಘ’ ಹಮ್ಮಿಕೊಂಡಿದ್ದ  ರಾಜ್‍ಕುಮಾರ್ ಅವರ 92ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಸಂಘ ಸಾಂಕೇತಿಕವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸುತ್ತಿದೆ. ಈ ಹಿಂದೆ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸುತ್ತಿತ್ತು ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಹರಳೂರು ಶಿವಕುಮಾರ್ ಮಾತನಾಡಿದರು. ಟಿ.ಜಿ.ಬಸವರಾಜು, ಮಲ್ಲಪ್ಪ, ಟಿ.ಸಿ.ದಯಾನಂದ್, ಕೊಪ್ಪಳ್‍ ನಾಗರಾಜು, ಬಂಬೂ ಮೋಹನ್, ಲಕ್ಷ್ಮಣ್, ಮನು ಹರಳೂರು, ಜೀವನ್‍ ಆಚಾರ್, ರವಿ ಮಲ್ಲಣ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು