ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕುಲಾಂತರಿ ಆಹಾರದ ವಿರುದ್ಧ ಸತ್ಯಾಗ್ರಹ

‘ದೊಡ್ಡಹೊಸೂರು ಸತ್ಯಾಗ್ರಹ’ಕ್ಕೆ ಸಜ್ಜು
Published : 14 ಸೆಪ್ಟೆಂಬರ್ 2024, 5:54 IST
Last Updated : 14 ಸೆಪ್ಟೆಂಬರ್ 2024, 5:54 IST
ಫಾಲೋ ಮಾಡಿ
Comments

ತುಮಕೂರು: ಕುಲಾಂತರಿ ಆಹಾರ (ಜಿಎಂಒ) ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ದೊಡ್ಡಹೊಸೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಸೆ. 29ರಿಂದ ಅಕ್ಟೋಬರ್ 2ರ ವರೆಗೆ ‘ದೊಡ್ಡಹೊಸೂರು ಸತ್ಯಾಗ್ರಹ’ ಹಮ್ಮಿಕೊಳ್ಳಲಾಗಿದೆ.

‘ರಾಷ್ಟ್ರದ ಪಾರಂಪರಿಕ ಕೃಷಿ ಜ್ಞಾನ, ಹಿರಿಮೆ, ದೃಷ್ಟಿಕೋನ, ಆಯಾಮ ವಿಸ್ತಾರವಾಗಿದ್ದು. ಇಂತಹ ದೇಶಕ್ಕೆ ಕುಲಾಂತರಿ ಆಹಾರ ತರಲು ಬಹುರಾಷ್ಟ್ರೀಯ ಕಂಪನಿಗಳು ಪಿತೂರಿ ನಡೆಸುತ್ತಿವೆ. ಕೃಷಿ, ಸಂಸ್ಕೃತಿ, ಪರಿಸರ ಮತ್ತು ಸಮಾಜ ವಿರೋಧಿ ಕೃತ್ಯ ನಡೆಸಲು ಮುಂದಾಗಿದೆ. ಇದು ಜೈವಿಕ ವ್ಯವಸ್ಥೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಸತ್ಯಾಗ್ರಹದ ಸಂಘಟಕ ಹಾಗೂ ವಿಜ್ಞಾನಿ ಎಚ್‌.ಮಂಜುನಾಥ್‌ ತಿಳಿಸಿದ್ದಾರೆ.

ಕುಲಾಂತರಿ ಆಹಾರ (ಜಿಎಂಒ) ಮತ್ತು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಕೃಷಿ ಕ್ಷೇತ್ರಕ್ಕೆ ಕಾಲಿಡದಂತೆ ಬುಡ ಸಮೇತ ಕಿತ್ತೊಗೆಯಬೇಕು. ಸ್ವದೇಶಿ ವ್ಯವಸ್ಥೆ ಹಾಳು ಮಾಡುವ ವಸಾಹತು ಸ್ಥಾಪನೆಗೆ ಅವಕಾಶ ನೀಡುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ. ದೊಡ್ಡಹೊಸೂರಿನ ಸತ್ಯಾಗ್ರಹಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಸೆ. 29ರಂದು ಬೆಳಿಗ್ಗೆ 10 ಗಂಟೆಗೆ ಚರ್ಚಾ ಅಧಿವೇಶನ ನಡೆಯಲಿದೆ. ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಕುಲಾಂತರಿ ಆಹಾರ ಪ್ರತಿಕೂಲ ಪರಿಣಾಮ, ಪಂಚಾಯಿತಿ ಮಟ್ಟದಲ್ಲಿ ನೈಸರ್ಗಿಕ ಕೃಷಿ ಮುಂದುವರಿಸುವ ತಂತ್ರಗಳ ಬಗ್ಗೆ ಚರ್ಚಿಸಲಾಗುತ್ತದೆ. ನಂತರ ಬೆಳಿಗ್ಗೆ 11.30 ಗಂಟೆಗೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕುಂಬುಚಾ, ಮಜ್ಜಿಗೆ ಪಂಚಗವ್ಯ ಇತರೆ ಸಾವಯವ ಒಳ ಸುರಿಗಳ ತಯಾರಿಕೆ, ಜೈವಿಕ ಗೊಬ್ಬರ, ಕೀಟನಾಶಕದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಗಿಡ ಕಸಿ ಮಾಡುವ, ಕಟ್ಟುವ ತಂತ್ರ ತಿಳಿಸಲಾಗುತ್ತದೆ. ವಿವಿಧ ಜಿಲ್ಲೆಗಳಿಂದ ನೂರಾರು ಜನ ರೈತರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಮಾಹಿತಿಗೆ ರವೀಶ್‌ ಮೊ 9900414891 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT