ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕುಲಾಂತರಿ ಆಹಾರದ ವಿರುದ್ಧ ಸತ್ಯಾಗ್ರಹ ಆರಂಭ

Published : 30 ಸೆಪ್ಟೆಂಬರ್ 2024, 5:22 IST
Last Updated : 30 ಸೆಪ್ಟೆಂಬರ್ 2024, 5:22 IST
ಫಾಲೋ ಮಾಡಿ
Comments

ತುಮಕೂರು: ಕುಲಾಂತರಿ ತಳಿಯ ಆಹಾರ (ಜಿಎಂಒ) ವಿರುದ್ಧದ ಸತ್ಯಾಗ್ರಹಕ್ಕೆ ತಾಲ್ಲೂಕಿನ ದೊಡ್ಡಹೊಸೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಭಾನುವಾರ ಚಾಲನೆ ದೊರೆಯಿತು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸತ್ಯಾಗ್ರಹ ಉದ್ಘಾಟಿಸಿದರು.

ಕುಲಾಂತರಿ ಕಾಯ್ದೆ ತಿರಸ್ಕರಿಸಿ, ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ಅ.2ರ ವರೆಗೆ ಸತ್ಯಾಗ್ರಹ ನಡೆಯಲಿದೆ. 

ಪ್ರತಿ ದಿನ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ. ಕುಲಾಂತರಿ ಆಹಾರ ಬಳಕೆಯಿಂದ ಕೃಷಿ ಹಾಗೂ ಜನರ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮ ಸೇರಿ ಹಲವು ವಿಷಯಗಳು ಕುರಿತು ಚರ್ಚೆ ನಡೆಯಲಿದೆ.

ಸತ್ಯಾಗ್ರಹದ ಮೊದಲ ದಿನ ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ ಮತ್ತು ತುಮಕೂರಿನ ರೈತರು ಪಾಲ್ಗೊಂಡಿದ್ದರು. ಕುಲಾಂತರಿ ತಳಿಯ ದುಷ್ಪರಿಣಾಮ ಕುರಿತು ಮನವರಿಕೆ ಮಾಡಿಕೊಡಲಾಯಿತು.

ಸಾವಯವ ಮಾದರಿಯಲ್ಲಿ ಅಡಿಕೆ, ತೆಂಗು ಬೆಳೆಯುವುದು, ಬಹು ಬೆಳೆ ಪದ್ಧತಿ, ನೀರಿನ ಬಳಕೆ ಬಗ್ಗೆ ತಿಳಿಸಲಾಯಿತು.ಕುಂಬುಚಾ, ಮಜ್ಜಿಗೆ ಪಂಚಗವ್ಯ ಇತರೆ ಸಾವಯವ ಒಳ ಸುರಿಗಳ ತಯಾರಿಕೆ, ಜೈವಿಕ ಗೊಬ್ಬರ, ಕೀಟನಾಶಕದ ಬಗ್ಗೆ ಮಾಹಿತಿ ನೀಡಲಾಯಿತು. ಆಯಾ ಜಿಲ್ಲೆಗಳಲ್ಲಿ ಸಹಜ ಕೃಷಿ ಅಳವಡಿಕೆ, ಕುಲಾಂತರಿ ಆಹಾರದ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ವಿಧಾನ ಪರಿಷತ್‌ ಸದಸ್ಯ ಮಧು ಮಾದೇಗೌಡ, ರಾಜ್ಯಸಭಾ ಮಾಜಿ ಸದಸ್ಯ ಅನಿಲ್ ಹೆಗ್ಡೆ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ತೇಜಸ್ವಿ ಪಟೇಲ್, ಪರಿಸರವಾದಿ ಸಿ.ಯತಿರಾಜು, ಸತ್ಯಾಗ್ರಹದ ಸಂಘಟಕ ಎಚ್‌.ಮಂಜುನಾಥ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT