ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಶಾಲೆ ಮುಂದೆ ನಿಲ್ಲುವ ಶಿಕ್ಷೆ

7
ಪೋಷಕರ ಅಸಮಾಧಾನ

ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಶಾಲೆ ಮುಂದೆ ನಿಲ್ಲುವ ಶಿಕ್ಷೆ

Published:
Updated:

ಕುಣಿಗಲ್: ಶಾಲಾ ಶುಲ್ಕ ಪಾವತಿಸದ ನಾಲ್ಕು ವಿದ್ಯಾರ್ಥಿಗಳನ್ನು ಮಧ್ಯಾಹ್ನದವರೆಗೂ ಶಾಲೆ ಮುಂದೆ ನಿಲ್ಲುವ ಶಿಕ್ಷೆಯನ್ನು ಶಿಕ್ಷಕರು ನೀಡಿದ್ದಾರೆ.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸಂತೇಪೇಟೆಯಲ್ಲಿರುವ ಖಾಸಗಿ ಶಾಲೆ ಎಸ್ಎನ್ಎಸ್ ಹಿರಿಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಈ ಶಿಕ್ಷ ವಿಧಿಸಿದ್ದು, ಪೋಷಕರು, ಗ್ರಾಮಸ್ಥರು ಖಂಡಿಸಿದ್ದಾರೆ. 

ಶಾಲೆಯ ಮುಂಭಾಗದಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಗ್ರಾಮಸ್ಥರು ಕಾರಣ ತಿಳಿದು ಪೋಷಕರ ಗಮನಕ್ಕೆ ತಂದರು. ಪೋಷಕ ಸಯ್ಯದ್‌ ಆಲಿ ಶಾಲೆ ಬಳಿ ಬಂದು ಮುಖ್ಯಸ್ಥ ಲೋಕೇಶ್ ಅವರನ್ನು ವಿಚಾರಿಸಿದಾಗ ಶಾಲಾ ಶುಲ್ಕ ಪಾವತಿಸಿ ಎಂದು ತಿಳಿಸಿದರು.

‘ಶಾಲೆಗೆ ಮಕ್ಕಳನ್ನು ಸೇರಿಸುವಾಗ ನಿಗದಿ ಮಾಡಿದ ₹ 10 ಸಾವಿರ ಶುಲ್ಕದ ಪೈಕಿ ಮೊದಲಿಗೆ ₹ 2 ಸಾವಿರ, ಕಳೆದ ವಾರ ₹ 3 ಸಾವಿರ ಪಾವತಿ ಮಾಡಿ ಉಳಿದ ಹಣ ಪಾವತಿಸಲು ಕಾಲಾವಾಕಾಶ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು ಕೇಳದೆ ಶುಲ್ಕ ಪಾವತಿಸಲು ಆಗ್ರಹಿಸಿದರು’ ಎಂದು ಪೋಷಕರಾದ ಸಯ್ಯದ್ ಆಲಿ ದೂರಿದ್ದಾರೆ.

ನಂತರ ಗ್ರಾಮಸ್ಥರಾದ ಕಾಳೇಗೌಡ ಮತ್ತು ಸಯ್ಯದ್ ಆಲಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಲು ಹೋದಾಗ ಶಿಕ್ಷಣಾಧಿಕಾರಿ ಇಲ್ಲದ ಕಾರಣ ಅಸಮಾಧಾನಗೊಂಡು ಗ್ರಾಮಕ್ಕೆ ಹಿಂತಿರುಗಿದ್ದಾರೆ.

‘ಶುಲ್ಕ ಪಾವತಿಸದಿರುವುದನ್ನು ಪೋಷಕರ ಗಮನಕ್ಕೆ ತರುವುದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಶಾಲೆ ಮುಂಭಾಗ ನಿಲ್ಲುವ ಶಿಕ್ಷೆ ನೀಡುವುದು ಖಂಡನೀಯ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಕೇವಲ 2 ತಿಂಗಳಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳಿಗೆ ಶಿಕ್ಷೆ ನೀಡುವ ಬದಲು ಪೋಷಕರಿಗೆ ಮಾಹಿತಿ ನೀಡಬೇಕು. ಮಕ್ಕಳನ್ನು ಹೊರಗಡೆ ನಿಲ್ಲಿಸಿದ್ದ ಶಾಲಾ ಮುಖ್ಯಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಗ್ರಾಮಸ್ಥರಾದ ಕಾಳೇಗೌಡ, ವೆಂಕಟೇಶ್, ನಾಗರಾಜು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !