ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳ ಮುಂಭಾಗ ಪ್ರಕಟಿಸಲಾಗಿದ್ದ ಶುಲ್ಕ ವಿವರ ಫಲಕ ಕಾಣೆ!

ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಅಸಮಾಧಾನ
Last Updated 8 ಮೇ 2019, 13:02 IST
ಅಕ್ಷರ ಗಾತ್ರ

ಕುಣಿಗಲ್: ಸರ್ಕಾರ ಮತ್ತು ನ್ಯಾಯಾಲಯಗಳ ಆದೇಶದ ಮೇರೆಗೆ ಜನವರಿ ತಿಂಗಳಲ್ಲಿ ಖಾಸಗಿ ಶಾಲೆಗಳ ಮುಂಭಾಗ ಪ್ರಕಟಿಸಲಾಗಿದ್ದ ಶಾಲಾ ಶುಲ್ಕ ವಿವರಗಳ ಪಟ್ಟಿ ಶಾಲೆ ದಾಖಲಾತಿ ಪ್ರಾರಂಭವಾಗುವ ಸಮಯಕ್ಕೆ ಕಣ್ಮರೆಯಾಗಿದ್ದು, ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ ಸುತ್ತೋಲೆ ಮೇರೆಗೆ ರಾಜ್ಯದ ಬಹುತೇಕ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಶಾಲೆಗಳ ಮುಂಭಾಗ ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಶುಲ್ಕದ ವಿವರಗಳನ್ನು ಪ್ರಕಟಿಸಿದ್ದರೂ, ತಾಲ್ಲೂಕಿನ ಕೆಲ ಶಾಲೆಗಳು ಪ್ರಕಟಿಸಿರಲ್ಲಿಲ್ಲ. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಗೂ ಖಾಸಗಿ ಶಾಲೆಯವರು ಜಗ್ಗದೆ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಪ್ರಕಟಿಸುವ ಭರವಸೆ ನೀಡಿದ್ದರು.

ಆದರೆ, ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದರೂ ಯಾವ ಖಾಸಗಿ ಶಾಲೆಯವರು ಶುಲ್ಕದ ವಿವರಗಳನ್ನು ಪ್ರಕಟಿಸಿಲ್ಲ. ಅಲ್ಲದೆ ಶುಲ್ಕದ ವಿವರಗಳನ್ನು ಪ್ರಕಟಿಸಿದವರು ಸಹ ತೆಗೆದು ಹಾಕಿದ್ದಾರೆ ಎಂದು ಪೋಷಕರಾದ ಕೆ.ಟಿ.ರಮೇಶ್ ಆರೋಪಿಸಿದ್ದಾರೆ.

‘ಖಾಸಗಿ ಶಾಲೆಯವರು ಸರ್ಕಾರದ ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪೋಷಕರಿಂದ ಪಾರದರ್ಶಕ ನೀತಿಯಡಿ ಶುಲ್ಕವನ್ನು ವಸೂಲಿ ಮಾಡದೆ, ಸ್ಪಷ್ಟ ಮಾಹಿತಿಯನ್ನು ನೀಡದೆ ಮರೆಮಾಚುತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಚಕಾರ ಎತ್ತದಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಕರವೇ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT