ಭಾನುವಾರ, ಸೆಪ್ಟೆಂಬರ್ 22, 2019
28 °C

ಶಾಲಾ ಬಸ್ ಪಲ್ಟಿ: 8ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

Published:
Updated:
Prajavani

ಚಿಕ್ಕನಾಯಕನಹಳ್ಳಿ: ಸಮೀಪದ ಕೆ.ಬಿ.ಕ್ರಾಸ್ ಹತ್ತಿರ ಗುರು ಇಂಗ್ಲಿಷ್ ಕಾನ್ವೆಂಟ್‌ನ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

8 ಮಕ್ಕಳಿಗೆ ಹಣೆ, ತುಟಿ, ಕಾಲು, ತಲೆಗೆ ಪೆಟ್ಟು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಶಾಲೆ ಮುಗಿದ ಬಳಿಕ ವಿವಿಧ ಊರುಗಳಿಗೆ ಮಕ್ಕಳನ್ನು ಬಿಡುವ ವೇಳೆ ಅಗಸ್ತರಹಳ್ಳಿ ಕೆರೆ ಕೋಡಿ ಸಮೀಪ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿದೆ. ಸಾರ್ವಜನಿಕರು ಮಕ್ಕಳನ್ನು ರಕ್ಷಿಸಿ ಚಿಕಿತ್ಸೆಗೆ ಕಳುಹಿಸಿದ್ದಾರೆ.

ಆಸ್ಪತ್ರೆಗೆ ಭೇಟಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Post Comments (+)