ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೆ ಪ್ರಚೋದನೆ: ಮೂವರಿಗೆ 7 ವರ್ಷ ಕಾರಾಗೃಹ ಶಿಕ್ಷೆ

Last Updated 8 ಆಗಸ್ಟ್ 2019, 19:03 IST
ಅಕ್ಷರ ಗಾತ್ರ

ಮಧುಗಿರಿ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಾಣಾಗಲು ಪ್ರೇರೇಪಿಸಿದ್ದ 3 ಮಂದಿ ಆರೋಪಿಗಳಿಗೆ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಧೀಶರಾದ ಪಾಟೀಲ್ ಮಹಮ್ಮದ್ ಗೌಸ್ ಮೊಹಿದ್ದೀನ್ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಪಾವಗಡ ಪಟ್ಟಣದ ಶಾಂತಿನಗರದ ವಾಸಿಗಳಾದ ಹನುಮಂತರಾಯಪ್ಪ ಮತ್ತು ಪಾರ್ವತಮ್ಮ ಎಂಬುವರ ಮಗ ಮೋಹನ್ ಕುಮಾರ್ ಇಂದಿರಮ್ಮ ಅವರ ಪುತ್ರಿ ನಂದಿನಿ ಅವರನ್ನು 2013 ನವಂಬರ್ 24 ರಂದು ವಿವಾಹ ವಿವಾಹವಾಗಿದ್ದರು.

ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ಚಿನ್ನದ ವಡವೆ ಹಾಗೂ ಹಣವನ್ನು ನೀಡಿದ್ದರು. ಆರೋಪಿತರು ಇನ್ನೂ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ನಂದಿನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದರು. 2017 ಮೇ 5 ರಂದು ನಂದಿನಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದಪಾಟೀಲ್ ಮಹಮ್ಮದ್ ಗೌಸ್ ಮೊಹಿದ್ದೀನ್ ಅವರು ಆರೋಪಿಗಳಾದ ಮೋಹನ್‌ಕುಮಾರ್, ತಂದೆ ಹನುಮಂತರಾಯಪ್ಪ, ತಾಯಿ ಪಾರ್ವತಮ್ಮ ಅವರಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಆರ್.ಟಿ.ಅರುಣಾ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT