ಭಾನುವಾರ, ಸೆಪ್ಟೆಂಬರ್ 26, 2021
21 °C

ಶಂಭುಲಿಂಗೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತುರುವೇಕೆರೆ: ತಾಲ್ಲೂಕಿನ ಪುರ ಗ್ರಾಮದಲ್ಲಿ ಶಂಭುಲಿಂಗೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಶಂಭುಲಿಂಗೇಶ್ವರ ದನಗಳ ಜಾತ್ರೆ ನೋಡುಗರನ್ನು ಕಣ್ಮನ ಸೆಳೆಯಿತು. ಜಾತ್ರೆ ಅಂಗವಾಗಿ ಶಂಭುಲಿಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು. ರಥವನ್ನು ವಿವಿಧ ಬಣ್ಣದ ಬಟ್ಟೆಗಳಿಂದ ಹಲವು ರೀತಿಯ ಹೂಗಳಿಂದ ಸಿಂಗರಿಸಲಾಗಿತ್ತು. ಬಳಿಕ ಮೂರ್ತಿಯನ್ನು ಕೂರಿಸಿ ವಿಶೇಷ ಪೂಜೆ, ಬಂಡಿ ಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಮಾಡಲಾಯಿತು.

ನಂತರ ಭಕ್ತರು ಶಂಭುಲಿಂಗನ ಜಯಘೋಷದೊಂದಿಗೆ ರಥವನ್ನು ಉತ್ಸಾಹದಿಂದ ದೇವಸ್ಥಾನದ ಮುಂಭಾಗದಿಂದ ಬನ್ನಿಮರದ ಬಳಿಗೆ ಎಳೆದು ಹಿಂತಿರುಗಿಸಿದರು. ಚಲಿಸುತ್ತಿದ್ದ ರಥಕ್ಕೆ ಭಕ್ತರು ಹಣ್ಣು, ಧವನ ಎಸೆಯುವ ಮೂಲಕ ತಮ್ಮ ಕೋರಿಕೆ ಕೇಳಿಕೊಂಡರು.

ರಥೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಂಜೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ, ಉಪಾಧ್ಯಕ್ಷ ರಾಜಶೇಖರ್, ಸದಸ್ಯ ಪಿ.ಎಲ್.ನವೀನ್‌ಕುಮಾರ್, ಮುಖಂಡರಾದ ಪಿ.ಟಿ.ಮಹೇಶ್, ಪಿ.ಟಿ.ಗಂಗಾಧರ್, ಎಂ.ಸಿ.ರೇಣುಕಪ್ಪ, ಮಲ್ಲೇಶಯ್ಯ, ಬಸವರಾಜು, ಮೋಹನ, ಜೈಪ್ರಕಾಶ್, ಕುಮಾರ ಹಾಗೂ ಮದಾಪಟ್ಟಣ, ಚೆಂಡೂರು, ಆನೆಮಳೆ ಗ್ರಾಮಸ್ಥರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು