‘ಶಾರದಾ ನಿನಾದ’ ವಿಶೇಷ ಸಂಗೀತ ಕಛೇರಿ

ಶುಕ್ರವಾರ, ಏಪ್ರಿಲ್ 26, 2019
21 °C

‘ಶಾರದಾ ನಿನಾದ’ ವಿಶೇಷ ಸಂಗೀತ ಕಛೇರಿ

Published:
Updated:
Prajavani

ತುಮಕೂರು: ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ‘ಶಾರದಾ ಮಾಧುರ್ಯ’ ಸಂಗೀತ ವೇದಿಕೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಕೀರ್ತಿಶೇಷ ಎಸ್.ಮಹದೇವಪ್ಪ ಅವರ ಸ್ಮರಣಾರ್ಥ ‘ಶಾರದಾ ನಿನಾದ’ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು.

ಈ ಸಂಗೀತ ಕಾರ್ಯಕ್ರಮವನ್ನು ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ಚೈತನ್ಯಮಯೀ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತಾಜೀ ಅವರು ಕಾಶಿಯಲ್ಲಿ ಸಾಧನಾನಿರತರಾಗಿರುವ ಗಿರಿಜಮ್ಮ ಅವರು ರಚಿಸಿರುವ ‘ಕಾಶಿ ಪುಣ್ಯರಾಶಿ’ ಪುಸ್ತಕ ಬಿಡುಗಡೆ ಮಾಡಿದರು. ಆಶ್ರಮದ ಪುಸ್ತಕ ಮಾರಾಟ ಮಳಿಗೆಯ ಆ್ಯಪ್ ‘ಅರೈಸ್ ಅವೇಕ್’ ಸಹ ಬಿಡುಗಡೆ ಮಾಡಲಾಯಿತು.

ಮೈಸೂರಿನ ವಿದ್ವಾನ್ ನಾಗರಾಜ್, ವಿದ್ವಾನ್ ಡಾ.ಮಂಜುನಾಥ್ ಹಾಗೂ ವಿದ್ವಾನ್ ಸುಮಂತ್ ಮಂಜುನಾಥ್‌ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು. ತಿರುಚಿಯ ವಿದ್ವಾನ್ ಬಿ.ಹರಿಕುಮಾರ್‌ರವರು ಮೃದಂಗ ಹಾಗೂ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್‌ ಅವರು ತಬಲದಲ್ಲಿ ಸಹಕರಿಸಿದರು.

ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !