ಶಿರಾ: ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಈಡಿಗ ಸಮಾಜದ ವೇದಮೂರ್ತಿ ಅವರನ್ನು ರಾಷ್ಟ್ರೀಯ ಈಡಿಗ ಮಹಾಮಂಡಳಿ ಮಂಗಳವಾರ ಸತ್ಕರಿಸಿತು.

ಈಡಿಗ ಸಮುದಾಯ ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದೆ. ಯಾರ ಮರ್ಜಿಗೂ ಒಳಗಾಗದೆ ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸಿ ಹಕ್ಕು ಪಡೆಯಬೇಕು ಎಂದು ಕೆಪಿಎಸ್ಸಿ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ ಹೇಳಿದರು.

ಉದ್ಯಮಿಗಳಾದ ಕೆ.ಎನ್. ಗುರುಸ್ವಾಮಿ, ವೆಂಕಟಸ್ವಾಮಿ, ಜೆ.ಪಿ.ನಾರಾಯಣಸ್ವಾಮಿ, ಆರ್.ಎಲ್.ಜಾಲಪ್ಪ ಮುಂತಾದ ಈಡಿಗ ಸಮುದಾಯದ ಹಿರಿಯ ಮುಖಂಡರು ಯಾರ ಕಾಲಿಗೂ ಬೀಳದೆ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಆದರೆ ಈಗ ಇರುವ ಸಮುದಾಯ ಮುಖಂಡರು ಸಿಕ್ಕ, ಸಿಕ್ಕವರ ಕಾಲಿಗೆ ಬಿದ್ದು ಜನಾಂಗದ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ ಎಂದರು.

ಈಡಿಗ ಸಮುದಾಯದ ಕಟ್ಟ ಕಡೆಯ ವ್ಯಕ್ತಿ ತೊಂದರೆಯಲ್ಲಿ ಇದ್ದರೆ ಅವರ ನೆರವಿಗೆ ಈಡಿಗ ಮಹಾಮಂಡಳಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಈಡಿಗ ಸಮುದಾಯದ ಮಕ್ಕಳನ್ನು ಪ್ರೋತ್ಸಾಹಿಸಲು ಜೂನ್ ತಿಂಗಳಲ್ಲಿ ಸಮುದಾಯದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಕಾರ್ಯದರ್ಶಿ ಹನುಮಂತರಾಜು ಹೇಳಿದರು.

ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷ ಎ.ಸುರೇಶ್, ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಡಿ ರಮೇಶ್, ವೆಂಕಟಶ್ವಾಮಯ್ಯ, ಎವಿಸಿ ರಾಜಣ್ಣ, ಶ್ರೀನಿವಾಸ್ ಎಸ್.ವಿ., ಅಂಜನೇಯಲು, ಈಡಿಗರದಾಸರ ಹಳ್ಳಿ ಬಾಲಣ್ಣ, ಹನುಮಂತಪ್ಪ, ಹುಳಿಗೆರೆ ರಾಮಸ್ವಾಮಿ, ಬಸವರಾಜು, ಮಣಿ, ಸಿದ್ದೇಶ್, ಅಜಯ್, ಜಂಜಾರಾಮನಹಳ್ಳಿ ಮೋಹನ್, ನವೀನ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-18-428605315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.