ಶಿರಾ: ದೇಶದಲ್ಲಿ ಮಹಾನ್ ನಾಯಕರನ್ನು ಕೇವಲ ಜಯಂತಿಗೆ ಸೀಮಿತ ಮಾಡಿರುವುದು ನೋವಿನ ವಿಚಾರ. ಅವರ ತತ್ವ, ಸಿದ್ಧಾಂತಗಳನ್ನು ಅರಿತುಕೊಂಡಿದ್ದರೆ ಜಾತೀಯತೆ ಕೊನೆಯಾಗುತ್ತಿತ್ತು ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹ.ರಾ.ಮಹೇಶ್ ಹೇಳಿದರು.

ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ನಡೆದ ಬುದ್ಧ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಂಬೇಡ್ಕರ್ ನಮಗೆಲ್ಲ ಬುದ್ಧನ ಪ್ರಜ್ಞೆ ನೀಡಿದ್ದಾರೆ. ಅದನ್ನು ನಾವು ಅನುಸರಿಸದಿರುವುದು ನೋವಿನ ಸಂಗತಿ. ಎಲ್ಲರೂ ಬುದ್ಧನ ತತ್ವಗಳನ್ನು ಅನುಸರಿಸಿ ಜಾತಿ ಎನ್ನುವ ರೋಗಕ್ಕೆ ಬುದ್ಧನ ತತ್ವಗಳು ಮದ್ದು ಎಂದು ಅಂಬೇಡ್ಕರ್ ಬರೆದಿದ್ದಾರೆ ಎಂದರು.

ಕ.ಅ.ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ ಮಾತನಾಡಿ, ಶೂದ್ರರಿಗೆ ನೂರು ವರ್ಷಗಳ ಹಿಂದೆ ಶಿಕ್ಷಣ ಇರಲಿಲ್ಲ. ಅಂಬೇಡ್ಕರ್ ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಶಿಕ್ಷಣ ದೊರಕಿದೆ. ಶಿಕ್ಷಣ ಪಡೆದವರು ಅರಿವು ಮೂಡಿಸುತ್ತಿಲ್ಲ ಎಂದರು.

ದಸಂಸ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡುವ ಮೂಲಕ ಗುಲಾಮಗಿರಿಗೆ ಅಂತ್ಯಹಾಡಿ ಜಾತಿ ವ್ಯವಸ್ಥೆಯನ್ನು ತೊಲಗಿಸಿ ವ್ಯಕ್ತಿ ಗೌರವಕ್ಕೆ ಭದ್ರ ತಳಹದಿ ಹಾಕಿದರು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವರಾಜು ಎನ್., ಆರ್.ವಿ.ಪುಟ್ಟಕಾಮಯ್ಯ, ಬರಗೂರು ನರಸಪ್ಪ, ಬೀರನಹಳ್ಳಿ ನರಸಪ್ಪ, ಅರ್ಷದ್, ಗೋಮಾರದನಹಳ್ಳಿ ಮಂಜುನಾಥ್, ನರಸಿಂಹರಾಜು.ಬಿ.ಕೆ., ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ, ಭಂತೇಜಿ ಧಮ್ಮವೀರ, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ತಾಲ್ಲೂಕು ದಸಂಸ ಅಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಕೋದಂಡರಾಮ, ರಾಜು.ಆರ್.ಆರ್., ಶ್ರೀರಂಗಪ್ಪ, ಚನ್ನನಕುಂಟೆ ರಂಗನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-17-2141806161

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.