ಶಿರಾ: ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪೇಪರ್ಲೆಸ್ (ಕಾಗದ ರಹಿತ) ನೋಂದಣಿ ವಿರೋಧಿಸಿ ಮಂಗಳವಾರ ಪತ್ರಬರಹಗಾರರು ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ದಸ್ತಾವೇಜು ಪತ್ರಬರಹಗಾರರ ಸಂಘ ಶಿರಾ ತಾಲ್ಲೂಕು ಘಟಕದಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಪ್ರತಿಭಟನ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಶಿರಾ ತಾಲ್ಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ಅಧ್ಯಕ್ಷ ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪೇಪರ್ಲೆಸ್ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳಿದ್ದು, ಮಾರಾಟಗಾರರಿಗೂ ಹಾಗೂ ಖರೀದಿಗಾರರಿಗೂ ಮೋಸ ಆಗುವ ಸಂಭವವಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ ಈ ತಂತ್ರಾಂಶವನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದರು.

ಶಿರಾ ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಪೇಪರ್ಲೆಸ್ ನೋಂದಣಿ ಪತ್ರದಲ್ಲಿ ಯಾವುದೇ ಸಹಿ ಇರುವುದಿಲ್ಲ. ಮೊಬೈಲ್ ಒಟಿಪಿ ಮೂಲಕ ನೋಂದಣಿ ನಡೆಯುವುದು. ದೇಶದಲ್ಲಿ ಅನೇಕ ಅನಕ್ಷರಸ್ಥರು ಇದ್ದು, ಅವರಿಗೆ ಇನ್ನು ಮೊಬೈಲ್ ಅರಿವು ಸಹ ಇಲ್ಲದಿರುವುದರಿಂದ ಅನೇಕ ಅವ್ಯವಹಾರಗಳಿಗೆ ಕಾರಣವಾಗುವುದು. ಆದ್ದರಿಂದ ಪೇಪರ್ಲೆಸ್ ನೋಂದಣಿ ಸ್ಥಗಿತಗೊಳಿಸಿ ಈ ಹಿಂದೆ ಇದ್ದ ರೀತಿಯಲ್ಲಿಯೇ ನೋಂದಣಿ ಪ್ರಕ್ರಿಯೆ ಮುಂದುವರೆಸಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪತ್ರ ಬರಹಗಾರರ ರಾಜ್ಯ ಒಕ್ಕೂಟದ ಸಂಚಾಲಕ ತುರುವೇಕೆರೆ ಮಂಜುನಾಥ, ತಾಲ್ಲೂಕು ಉಪಾಧ್ಯಕ್ಷ ಶ್ರೀರಂಗಪ್ಪ, ಖಜಾಂಚಿ ನರಸಪ್ಪ, ನರಸಿಂಹಮೂರ್ತಿ, ಶಿವಲಿಂಗಯ್ಯ, ಮಂಜುನಾ, ಅನುಸೂಯಮ್ಮ ಏಕಾಂತಮ್ಮ, ಶಿವಕುಮಾರ್, ಕೃಷ್ಣಮೂರ್ತಿ, ಈಶ್ವರ, ಗಾದ್ರಪ್ಪ, ಸುಧೀಂದ್ರ, ಕೆಂಚಪ್ಪ ರಂಗಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-17-1633725672

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.