ಶಿರಾ: ನೆಲಮೂಲ ಸಂಸ್ಕೃತಿಯನ್ನು ಉಳಿಸಿ, ಮಹಿಳೆಯರಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಲು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.

ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ಭಾನುವಾರ ಸಿಎಂಜಿ ಅಭಿಮಾನಿ ಬಳಗ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಯುಗಾದಿ ಹಾಗೂ ಶ್ರೀರಾಮ ನವಮಿ ಪ್ರಯುಕ್ತ ರಂಗೋಲಿ ಸ್ಪರ್ಧೆಯನ್ನು ತಾಲ್ಲೂಕಿನಾದ್ಯಂತ ನಡೆಸಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲಾಗುತ್ತಿದೆ ಎಂದರು.

ಸ್ಪರ್ಧಾ ವಿಜೇತರು: ತಾವರೆಕೆರೆ ಗ್ರಾಮವನ್ನು ಮೂರು ವಾರ್ಡ್ಗಳಾಗಿ ವಿಂಗಡಿಸಿ 9 ಮಂದಿಗೆ ಬಹುಮಾನ ವಿತರಿಸಲಾಯಿತು. ರೋಜ, ಅನನ್ಯ ಸ್ನೇಹ, ಶರಣ್ಯ ಅವರಿಗೆ ಪ್ರಥಮ ಬಹುಮಾನ ತಲಾ ₹5 ಸಾವಿರ, ಆಶಾ ತಿಪ್ಪೇಶ್, ರಮ್ಯ, ಉಮಾ ಅವರಿಗೆ ದ್ವಿತೀಯ ಬಹುಮಾನ ತಲಾ ₹3 ಸಾವಿರ, ಸೃಷ್ಟಿ, ಮಂಜುಳಾ ನಾಗರಾಜು, ಶ್ರಾವಂತಿ ಅವರಿಗೆ ತೃತೀಯ ಬಹುಮಾನ ₹2 ಸಾವಿರ ನೀಡಲಾಯಿತು.

ಶಿವು ಸ್ನೇಹಪ್ರಿಯ, ಎಸ್ಡಿಎಂಸಿ ಸದಸ್ಯ ಶಿವಕುಮಾರ್, ಮಧು, ಸತ್ಯಭಾಮ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ರಮೇಶ್, ಕುಮಾರ್ ಮಾಸ್ಟರ್, ನೇರಲಗುಡ್ಡ ಶಿವಕುಮಾರ್, ಮದ್ದಕ್ಕನಹಳ್ಳಿ ಗೌಡಪ್ಪ, ಗೋವಿಂದ, ರಾಜು, ಡಿ.ಎಚ್.ಗೌಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-572755110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.