ಶಿರಾ: ಪರವಾನಗಿ ಪಡೆದ ಭೂಮಾಪಕರು ಎರಡು ತಿಂಗಳಿನಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಭೂಮಾಪನ ಇಲಾಖೆ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜಮೀನು ವ್ಯವಹಾರ ಹಾಗೂ ಸರ್ಕಾರಿ ಕೆಲಸಗಳಿಗಾಗಿ ರೈತರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

ತಾಲ್ಲೂಕಿನಲ್ಲಿ 34 ಮಂದಿ ಸರ್ಕಾರದಿಂದ ಪರವಾನಗಿ ಪಡೆದ ಭೂಮಾಪಕರಿದ್ದಾರೆ. ಇವರೆಲ್ಲರೂ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಕಚೇರಿಯ ಕಪಾಟು ಸೇರಿವೆ.

ಹದ್ದುಬಸ್ತು 1966, ದರಖಾಸ್ತು1621, 11 ಇ ಸ್ಕೆಚ್ 406 ಅರ್ಜಿ, ತತ್ಕಾಲ್ ಪೋಡಿ 407, ಇತರೆ ಕೆಲಸಗಳ 42 ಅರ್ಜಿಗಳು ಸೇರಿದಂತೆ 4442 ಅರ್ಜಿ ಬಾಕಿ ಉಳಿದಿವೆ.

ಭೂಮಾಪಕರ ಮುಷ್ಕರದಿಂದಾಗಿ ಬ್ಯಾಂಕ್ ಸಾಲ ಪಡೆಯಲು ಹಾಗೂ ತುರ್ತು ಆರ್ಥಿಕ ಅಗತ್ಯತೆ ಇರುವವರಿಗೆ ಇದರಿಂದಾಗಿ ಭಾರೀ ಹೊಡೆತ ಬಿದ್ದಿದೆ.

ಭೂದಾಖಲೆಗಳ ಇಲಾಖೆಯಲ್ಲಿ 21 ಭೂಮಾಪಕರ ಹುದ್ದೆಗಳು ಮಂಜೂರಾಗಿದೆ. ಇದರಲ್ಲಿ 4 ಹುದ್ದೆಗಳು ಖಾಲಿ ಇದೆ. ಇರುವ 17 ಮಂದಿಯಲ್ಲಿ ಒಬ್ಬರನ್ನು ಬೇರೆ ತಾಲ್ಲೂಕಿಗೆ ನಿಯೋಜನ ಮಾಡಿದ್ದಾರೆ. ಪರವಾನಗಿ ಪಡೆದ ಭೂಮಾಪಕರು ಮುಷ್ಕರ ನಡೆಸುತ್ತಿರುವುದರಿಂದ ಈ ಕೆಲಸಗಳಿಗಾಗಿ ಇಬ್ಬರನ್ನು ನಿಯೋಜನೆ ಮಾಡಲಾಗಿದೆ.

ಜಮೀನು ಖರೀದಿ, ನಿವೇಶನ ಮಾರಾಟ ಅಥವಾ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಭೂಮಾಪನ ಇಲಾಖೆಯ ನಕ್ಷೆ ಮತ್ತು ಹದ್ದುಬಸ್ತು ಅತ್ಯಗತ್ಯ. ಪೋಡಿ, ದಾರಿ ನಕ್ಷೆಯಂತಹ ಮೂಲಭೂತ ಕೆಲಸಗಳಿಗಾಗಿ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.

ಸರ್ಕಾರ ಮತ್ತು ಭೂಮಾಪಕರ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಮಕ್ಕಳ ಮದುವೆ, ಮಕ್ಕಳ ಶಿಕ್ಷಣ, ತುರ್ತು ಚಿಕಿತ್ಸೆಗಾಗಿ ಜಮೀನು ಮಾರಾಟ ಮಾಡಲು ಹೋದರೆ ಹದ್ದುಬಸ್ತು ಮತ್ತು ನಕ್ಷೆ ಕಡ್ಡಾಯವಾಗಿ ಬೇಕು. ಈಗ ಸರ್ವೆ ಕೆಲಸಗಳು ನಡೆಯದ ಹಿನ್ನೆಲೆಯಲ್ಲಿ ಖರೀದಿ-ಮಾರಾಟ ಸ್ಥಗಿತಗೊಂಡಿದ್ದು ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-17-420693025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.